ಸಾಂಸ್ಕೃತಿಕ ಕಾರ್ಯಕ್ರಮ – ಸನ್ಮಾನ ಸಮಾರಂಭ 

 ಹಿರಿಯೂರು.ಜು.೧೭:  ಹಿರಿಯೂರಿನ ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಮತ್ತು ಜ್ಯೋತಿ ಸ್ವರೂಪಿಣಿ ಮಹಿಳಾ ಲಲಿತ ಕಲಾಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 75ನೇ ವರ್ಷದ ಸ್ವತಂತ್ರೋತ್ಸವ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭವನ್ನು ಇಲ್ಲಿನ ಕೆಎಂ ಕೊಟ್ಟಿಗೆ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ನಗರಸಭೆ ಸದಸ್ಯರಾದ ಶ್ರೀಮತಿ ಅಂಬಿಕಾರವರು ಮಾತನಾಡುತ್ತಾ ಸ್ವತಂತ್ರೋತ್ಸವದ ಮಹತ್ವದ ಬಗ್ಗೆ ತಿಳಿಸಿದರು ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಇಂದು ಮಹಿಳೆಯರು ವೈದ್ಯರಾಗಿ ಪೊಲೀಸರಾಗಿ ವಕೀಲರಾಗಿ ಬಸ್ ಕಂಡಕ್ಟರ್ ಆಗಿ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿರುವುದು  ಸಂತೋಷಕರ ಎಂದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಂಗೀತವನ್ನು ಸಹ ಕಲಿಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಪ್ರಾಂಶುಪಾಲರಾದ ಆರ್ ತಿಪ್ಪೇಸ್ವಾಮಿ ಮುಖ್ಯ  ಶಿಕ್ಷಕರಾದ ಕೆಎಂ. ಪಾಂಡುರಂಗಯ್ಯ ಶಿಕ್ಷಕರಾದ ಶಿವಮೂರ್ತಿ, ಹೇಮಗಿರಿ, ನಿವೃತ್ತ ಶಿಕ್ಷಕರಾದ ಎಂ ಬಿ ಲಿಂಗಪ್ಪ ಮತ್ತಿ ತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಜಗದಂಬ ಮತ್ತು ಸಿದ್ದಗಂಗಮ್ಮ ತಂಡದವರಿಂದ ಸಂಗೀತೋತ್ಸವ ಕಾರ್ಯಕ್ರಮ ನಡೆಸಲಾಯಿತು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ  ಅಂಬಿಕಾ ರಾಧಾ, ಹೆಲನ್ ಮೇರಿ, ಮತ್ತು ಆರ್ ರೇಖಾ ಇವರನ್ನು ಸನ್ಮಾನಿಸಲಾಯಿತು.