ಸಾಂಸ್ಕೃತಿಕ ಕಾರ್ಯಕ್ರಮ ಮಾನಸಿಕ ಒತ್ತಡ ನಿಯಂತ್ರಣಕ್ಕೆ ಪೂರಕ

ಕೋಲಾರ,ಮೇ.೨೩- ಕಲೆ, ನಾಟಕಗಳು ಮಾನವನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಉಲ್ಲಾಸ, ಆನಂದವನ್ನು ತುಂಬುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಮಾಜಿಕವಾಗಿ ಒಗ್ಗಟ್ಟು ಪ್ರದರ್ಶಿಲು ಪೂರಕವಾಗಲಿದೆ ಎಂದು ನಾಗಲಾಪುರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯ ಪಟ್ಟರು
ತಾಲ್ಲೂಕು ವಕ್ಕಲೇರಿ ಹೋಬಳಿ, ನಾಗಲಾಪುರ ಗ್ರಾಮದ ಶ್ರೀ ಗದ್ದುಗೆ ಕೃಪಾ ಪೋಷಿತ ನಾಟಕ ಮಂಡಳಿಯಿಂದ ಹಮ್ಮಿಕೊಂಡಿದ್ದ ಕುರುಕ್ಷೇತ್ರ ನಾಟಕದ ಪ್ರಯುಕ್ತ ನಿರ್ದೇಶಕರಾದ ನುಗ್ಗಲಾಪುರ ರಮೇಶ್‌ರವರನ್ನು ಸ್ವಾಮಿಜಿಗಳು ಸನ್ಮಾನಿಸಿ ಆರ್ಶೀವದಿಸಿ ಮಾತನಾಡಿದರು.
ಟಿ.ವಿ., ಕಂಪ್ಯೂಟರ್, ಇಂಟರ್‌ನೆಟ್ ಯುಗದಲ್ಲಿ ಪೌರಾಣಿಕ ನಾಟಕ, ಜಾನಪದ ಕಲೆಗಳು ಮಾಯವಾಗುತ್ತಿದ್ದು, ನಮ್ಮ ಸಂಸ್ಕೃತಿಯ ಸೊಗಡನ್ನು ನಾವು ಕಾಪಾಡಿಕೊಂಡು ಹೋಗಬೇಕು. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ಈ ಸಂದರ್ಭದಲ್ಲಿ ಧಮನಟ್ನಹಳ್ಳಿ ಆರ್ಯೂವೇದ ಪಂಡಿತರಾದ ಡಾ|| ಆರ್.ವೆಂಕಟೇಶ್ ಮೂರ್ತಿ, ಕೆ.ವಿಜಯ್, ಚಲ್ಲಹಳ್ಳಿ ಆದಿಮೂರ್ತಿ, ನಾಗಲಾಪುರ ರಾಜೇಶ್, ವೀರೇಂದ್ರ ಪಾಟೀಲ್, ಮದುಚಂದ್ರ, ಶ್ರೀನಿವಾಸ್, ಪ್ರಕಾಶಯ್ಯ ಮುಂತಾದವರು ಹಾಜರಿದ್ದರು.