
ಸಂಜೆವಾಣಿ ವಾರ್ತೆ
ಸಂತೇಬೆನ್ನೂರು.ನ.೯: ದೊಡ್ಡಬ್ಬಿಗೆರೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬಯಲು ರಂಗಮಂದಿರ ನಿರ್ಮಾಣಕ್ಕೆ ಗ್ರಾ.ಪಂ. ಸದಸ್ಯ ಹಾಗೂ ಅತಿಥಿ ಉಪನ್ಯಾಸಕರೊಬ್ಬರು ವಿರೋಧ ಮಾಡಿದ್ದು, ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗ್ರಾ. ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಬಯಲು ರಂಗ ಮಂದಿರ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಸಲ್ಲಿಸಿದ್ದರು, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿಯಿಂದ 5 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ರಂಗಮಂದಿರ ನಿರ್ಮಾಣದ ಹಂತದಲ್ಲಿದ್ದು ಗ್ರಾ. ಪಂ. ಸದಸ್ಯ ವಿರೋಧ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶದಿಂದ ರಂಗಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಬೆರಸಿ ಅಡ್ಡಿಪಡಿಸಲಾಗುತ್ತಿದೆ ಎಂಬುದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸವಿತಾ ಪರಮೇಶ್ ಹಾಗೂ ಹಾಲಿ ಅಧ್ಯಕ್ಷರಾದ ತಿಮ್ಮಪ್ಪ, ಗ್ರಾಮದ ಮುಖಂಡರು ಸೇರಿ ಉಳಿದ ಸದಸ್ಯರ ಆರೋಪವಾಗಿದೆ. ಈತ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ್ ಬೆಂಬಲಿಗನಾಗಿದ್ದು, ಹೀಗಾಗಿ ದ್ವೇಷದ ರಾಜಕಾರಣದಿಂದ ವಿರೋಧ ಮಾಡುತ್ತಿದ್ದಾನೆ. ಬಯಲು ರಂಗಮ ಮಂದಿರ ನಿರ್ಮಾಣ ಉದ್ದೇಶ ಸರ್ಕಾರಿ ಶಾಲಾ ಮಕ್ಕಳು ಸಾಂಸ್ಕøತಿಕ ಚಟುವಟಿಕೆ ಮಾಡಲು ಸೂಕ್ತ ವೇದಿಕೆ ಇರಲಿಲ್ಲ ಈ ಕಾರಣ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಶಾಸಕರಾದ ಬಸವರಾಜು ವಿ ಶಿವಗಂಗಾ ಅವರು 5 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಇದೀಗ ಕಾಮಗಾರಿ ನಡೆಯುತ್ತಿದ್ದು ಗ್ರಾ.ಪಂ. ಸದಸ್ಯ ವಿರೋಧ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಹೆಚ್ಚು ಅನುಕೂಲವಿದೆ, ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಇಲ್ಲಿ ಮಾಡಬಹುದಾಗಿದೆ. ಇದಕ್ಕೆ ಅಡ್ಡಿಪಡಿಸಿದರೆ ನಮ್ಮ ಮಕ್ಕಳಿಗೆ ಅನಾನೂಕೂಲವಾಗಲಿದೆ. ಶಾಲೆ ಅಭಿವೃದ್ಧಿಯಾದರೆ ಗ್ರಾಮವೂ ಅಭಿವೃದ್ಧಿಯಾಗುತ್ತದೆ, ಹೀಗೆ ದ್ವೇಷದ ರಾಜಕಾರಣದಿಂದ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಯಾಗಲ್ಲ ಎಂದಿದ್ದಾರೆ. ಸಂತೇಬೆನ್ನೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿರುವ ಯತೀಶ್ ಗ್ರಾ.ಪಂ. ಸದಸ್ಯನೂ ಕೂಡ ಹೌದು, ಈತ ಈ ಹಿಂದೆ ಕೆಲ ಕಾಮಗಾರಿಗಳನ್ನ ಮಾಡದೇ ಬಿಲ್ ಪಡೆದಿದ್ದು ಈ ಬಗ್ಗೆ ಸ್ಥಳೀಯ ಗ್ರಾ.ಪಂ ಸದಸ್ಯರು ಪ್ರಶ್ನೆ ಮಾಡಿದ್ದರು ಇದೇ ದ್ವೇಷಕ್ಕೆ ಇದೀಗ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಅಡ್ಡಿ ಮಾಡುತ್ತಿದ್ದಾನೆ ಎಂಬುದು ಗ್ರಾಮ ಪಂಚಾಯಿತಿ ಸದಸ್ಯರ ಆರೋಪ. ಬಯಲು ರಂಗ ಮಂದಿರ ನಿರ್ಮಾಣ ಪೂರ್ಣ ಮಾಡಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರಾದ ಕೊಟ್ರ ಬಸಪ್ಪ ಎನ್ ಬಿ. ನಾಗರಾಜ್, ರುದ್ರಮುನಿ, ಬಿಕೆ. ಬಸವಲಿಂಗಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಮಹೇಶ್, ಪರಿಮಳ ಸೇರ ಹಲವರು ಮಾನ್ಯ ಜಿಲ್ಲಾದಿಕಾರಿಗಳು ಹಾಗೂ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.