ಸಾಂಬಾರ್ ಪುಡಿ

ಬೇಕಾಗುವ ಸಾಮಗ್ರಿಗಳು
*ಕಡಲೇಬೇಳೆ – ೨ ಚಮಚ
*ಕೊತ್ತಂಬರಿ ಬೀಜ – ೫೦ ಗ್ರಾಂ
*ಬ್ಯಾಡಗಿ ಮೆಣಸಿನಕಾಯಿ – ೭೫ ಗ್ರಾಂ
*ಮೆಂತ್ಯ – ೧ ಚಮಚ
*ಜೀರಿಗೆ – ೨ ಚಮಚ
*ಗಸಗಸೆ – ೨ ಚಮಚ
*ಕೊಬ್ಬರಿ ತುರಿ -೨ ಚಮಚ
*ಎಣ್ಣೆ – ೩ ಚಮಚ

ಮಾಡುವ ವಿಧಾನ :

ಪ್ಯಾನ್‌ಗೆ ಎಣ್ಣೆ ಹಾಕಿ ಕಾಯಿಸಿ. ಕಡಲೇಬೇಳೆ, ಮೆಂತ್ಯ, ಜೀರಿಗೆ, ಕೊತ್ತಂಬರಿ ಬೀಜ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಗಸಗಸೆ, ಕೊಬ್ಬರಿ ತುರಿ ಹಾಕಿ ಇನ್ನಷ್ಟು ಹುರಿದುಕೊಳ್ಳಿ. ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಂಡರೆ ಸಾಂಬಾರ್ ಪುಡಿ ರೆಡಿ.