ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು

ತಿಪಟೂರು, ಜು. ೩೦- ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂಪ್ರದಾಯಿಕ ಉಡುಗೆ-ತೊಡುಗೆಗಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಮಿಂಚಿದರು.
ವೇದಿಕೆಗೆ ವಿದ್ಯಾರ್ಥಿಗಳು ವಿಭಿನ್ನವಾದ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಬರುತ್ತಿದ್ದಂತೆ ನೆರೆದಿದ್ದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ವಿದ್ಯಾರ್ಥಿನಿಯರು ಸೀರೆ ಉಟ್ಟು ಮಿಂಚಿದರೆ, ವಿದ್ಯಾರ್ಥಿಗಳು ಲುಂಗಿ-ಪಂ ಹುಟ್ಟು ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಎಲ್ಲರ ಕೈಯಲ್ಲಿಗ್ಗ ಫೋನ್‌ಗಳ ಮೂಲಕ ಸೆಲ್ಫಿ ಫೋಟೋಗಳನ್ನು ತೆಗೆದುಕೊಂಡು ಖುಷಿ ಪಟ್ಟರು.
ಕಾರ್ಯಕ್ರಮ ಉದ್ದೇಶಿಸಿ ಪ್ರಾಂಶುಪಾಲರಾದ ಡಾ.ಕೆ.ಬಿ. ಸರಸ್ವತಿ ಅವರು ಮಾತನಾಡಿ, ಇಂದಿನ ಯುವ ಪೀಳಿಗೆ ಸಂಪ್ರದಾಯಗಳನ್ನು ಮರೆತು ಆಧುನಿಕ ಪದ್ಧತಿಯಲ್ಲಿ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇಂದು ನಮ್ಮ ಆಧುನಿಕ ಪದ್ಧತಿಯ ಉಡುಗೆ ತೊಡುಗೆ, ಆಹಾರ ಪದ್ಧತಿಗಳನ್ನು ಮೆಲುಕು ಹಾಕುತ್ತಾ ಪೂರ್ವಜರ ಪದ್ದತಿಗಳನ್ನು ಅನುಸರಿಸುತ್ತಾ ಹೋಗುವುದು ಒಂದು ಕಲೆಯಾಗಿ ಉಳಿದಿದೆ. ಎಲ್ಲ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನುಟ್ಟು ಮಿಂಚುತ್ತಿದ್ದಾರೆ. ಜತೆಗೆ ಉಪನ್ಯಾಸಕರು ಕೂಡ ಸಾಂಪ್ರದಾಯಕ ಉಡುಗೆಗಳನ್ನು ತೊಟ್ಟು ವಿದ್ಯಾರ್ಥಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ನಮ್ಮ ಕಾಲೇಜಿನಲ್ಲಿ ವಿಭಿನ್ನ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಚರಿಸುತ್ತಿರುವುದು ಉತ್ತಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಕುಳಿದು ಕುಪ್ಪಳಿಸಿದರು. ರಾರಾ ರುಕ್ಕಮ್ಮ.. ಲುಂಗಿ ಡ್ಯಾನ್ಸು.. ಪ್ಯಾರ್ಗೆ ಆಗ್ಬಿಟ್ಟೈತೆ. ವಿವಿಧ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ಸಂಭ್ರಮಿಸಿದರು.
ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಕೂಡ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿ ವಿದ್ಯಾರ್ಥಿಗಳನ್ನು ಖುಷಿಪಡಿಸಿದರು. ಪ್ರಾಧ್ಯಾಪಕರು ಕೂಡ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ವಿದ್ಯಾರ್ಥಿ ಗಳಿಗೆ ಫೋಟೋ ನೀಡಿ ಖುಷಿ ಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಗಳಾದ ಡಾ.ರೇಣುಕ ಪ್ರಸಾದ್, ಡಾ. ಚಿಕ್ಕಹೆಗ್ಢೆ , ಡಾ.ಕುಮಾರಸ್ವಾಮಿ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಮತ್ತು ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.