ಸಾಂಪ್ರದಾಯಕ ಸರಳ ಗುಂಜಾನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

ತಿ.ನರಸೀಪುರ.ಮಾ.29* -ದಕ್ಷಿಣ ಕಾಶೀ ಖ್ಯಾತಿಯ ತಿ.ನರಸೀಪುರದ ಶ್ರೀ ಮಹಾಲಕ್ಷ್ಮಿ ಗುಂಜಾನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳೊಂದಿಗೆ ಸರಳವಾಗಿ ನೆರವೇರಿತು.
ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಆಡಳಿತ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಸರಳ ರಥೋತ್ಸವ ಆಚರಿಸಲು ನಿರ್ಧರಿಸಿತ್ತು.
ಅದರಂತೆ ಇಂದು ಬೆಳಿಗ್ಗೆ ಯಿಂದಲೇ ದೇವಾಲಯ ಒಳಾವರಣದಲ್ಲಿ ಪೂಜಾ ಕೈಂಕರ್ಯಗಳು ನಡೆದವು,ಧಾರ್ಮಿಕ ಕಾರ್ಯಕ್ರಮಗಳು ನಡೆದ ನಂತರ ಪ್ರಮುಖರು ದೇವಸ್ಥಾನದ ಮುಂಭಾಗದಲ್ಲಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಶಿರಸ್ತೇದಾರ್ ಕೃಷ್ಣಮೂರ್ತಿ ಚಾಲನೆ ನೀಡಿದರು.
ಆನಂತರ ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ನೆರೆದಿದ್ದ ಸೀಮಿತ ಸಂಖ್ಯೆಯ ಭಕ್ತಾಧಿಗಳು ದೇವಾಲಯದ ಮುಂಭಾಗ ಸಿಂಗರಿಸಿ ನಿಲ್ಲಿಸಲಾಗಿದ್ದ ರಥವನ್ನು ರಥ ಮಂಟಪದ ವರೆಗೆ ಎಳೆದು ನಿಲ್ಲಿಸಿದರು.ಭಕ್ತಾದಿಗಳು ರಥಕ್ಕೆ ಹಣ್ಣು-ಧವನ ಎಸೆದು ಭಕ್ತಿ ಸಮರ್ಪಿಸಿದರು.ಕೋವಿಡ್ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯ,ಊರಿನ ಭಕ್ತಾದಿಗಳಿಗೆ ನಿರ್ಭಂಧ ಹೇರಿ ಸ್ಥಳೀಯರಿಗೆ ಮಾತ್ರ ರಥೋತ್ಸವದಲ್ಲಿ ಭಾಗವಹಿಸಲು ಅವಕಾಶಮಾಡಿ ಕೊಡಲಾಗಿತ್ತು.ದೇವಾಲಯದ ಮುಂಭಾಗ 50ಮೀಟರ್ ತನಕ ತೇರು ಎಳೆದು ಭಕ್ತಾಧಿಗಳು ಭಕ್ತಿಭಾವ ಮೆರೆದರು .
ಕೋವಿಡ್ ಹಿನ್ನಲೆ ಭಕ್ತಾಧಿಗಳು ಮತ್ತು ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದ ತಾಲ್ಲೂಕು ಆಡಳಿತ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇೀಲಿಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು.