ಸಾಂಗವಾಗಿ ನೆರವೇರಿದ ಸಾಮೂಹಿಕ ಶ್ರೀ ಗಾಯಿತ್ರಿ ಉಪಾಸನೆ

ದಾವಣಗೆರೆ, ಮೇ.8; ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ ಕಳೆದ 23 ವರ್ಷಗಳಿಂದ ಪ್ರತೀ ತಿಂಗಳ ಹುಣ್ಣಿಮೆಯಂದು ನಗರದ ಜಯದೇವ ವೃತ್ತದ ಹತ್ತಿರವಿರುವ ಶ್ರೀ ಶಂಕರಮಠದ ಆವರಣದಲ್ಲಿ ಬುದ್ಧ ಹುಣ್ಣಿಮೆಯ ಅಂಗವಾಗಿ ಸಾಮೂಹಿಕ ಗಾಯಿತ್ರಿ ಪೂಜೆ, ಉಪಾಸನೆ ಯಶಸ್ವಿಯಾಗಿ ಅಷ್ಟೋತ್ತರ, ಮೃತ್ಯುಂಜಯ ಜಪದೊಂದಿಗೆ ಶ್ರೀ ಗಾಯತ್ರಿ ಪೂಜೆ, ಉಪಾಸನೆ ಯಶಸ್ವಿಯಾಗಿ ನಡೆಯಿತು ಎಂದು ಗಾಯತ್ರಿ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.ಇಂದಿನ ಪೂಜಾ ಸೇವಾಕರ್ತರಾದ  ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ ಯವರ ಪೂಜಾಸೇವೆಯ ಈ ಆಧ್ಯಾತ್ಮ ಪರಂಪರೆಯ ಶ್ರೀ ಗಾಯತ್ರಿ ಮಂತ್ರ ಅಷ್ಟೋತ್ತರ, ಮೃತ್ಯುಂಜಯ ಜಪ ಸರ್ವರಿಗೂ ಶ್ರೀ ಗಾಯತ್ರಿ ಕಂಕಣ ಕಟ್ಟುವ ಕಾರ್ಯಕ್ರಮದಲ್ಲಿ ಪರಿವಾರದ ಅಧ್ಯಕ್ಷರಾದ ಡಾ ಸುಶೀಲಮ್ಮ ಪರಿವಾರದ ಗೌರವಾಧ್ಯಕ್ಷರಾದ ಕೆ.ಹೆಚ್. ಮಂಜುನಾಥ್, ಉಪಾಧ್ಯಕ್ಷರಾದ ಡಾ. ರಮೇಶ್ ಪಟೇಲ್, ಸಮಿತಿ ಸದಸ್ಯರಾದ ಸತೀಶ್.ಆರ್.ಎಂ., ಮೋಹನ್ ಗುಮ್ಮನಾಯ್ಕ, ಸತ್ಯನಾರಾಯಣ, ಪ್ರಸಾದ್, ವೀರಭ್ರಪ್ಪ ಕುಟುಂಬ ಸಂಧ್ಯಾ ಶ್ರೀನಿವಾಸ್, ಶಿವಕುಮಾರಸ್ವಾಮಿ, ಹೇಮಾ ಶಾಂತಪ್ಪ ಪೂಜಾರಿ ಹರಿ ಸುಮಂತ್ ಮುಂತಾದವರು ಉಪಸ್ಥಿತರಿದ್ದರು.