ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಮಹತ್ವ ನೀಡಿ: ತಹಶೀಲ್ದಾರ್ ಶಿವಾನಂದ ಮೇತ್ರೆ

ಸೇಡಂ,ಜೂ, 01: ಮಳೆಗಾಲದಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರು ಸರಬರಾಜು ಆಗುತ್ತಿರುವ ವೇಳೆಯಲ್ಲಿ ನೀರಿನ ಪೈಪ್ ಲೈನ್ ತಪಾಸಣೆ ಮಾಡುವುದರ ಜೊತೆಗೆ ನೀರು ಕಾಯಿಸಿ ಕುಡಿಯುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡುವುದರ ಜೊತೆಗೆ ಬರುವಂತಹ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಚಿಕಾನ್ಗುನ್ಯಾ ಹರಡಿದಂತೆ ತಡೆಗಟ್ಟುವಿಕೆಗೆ ಮಹತ್ವ ನೀಡಿ ಎಂದು ತಹಸಿಲ್ದಾರ್ ಶಿವಾನಂದ ಮೇತ್ರೆ ಹೇಳಿದರು. ಪಟ್ಟಣದ ತಾಲೂಕಾ ಪಂಚಾಯತ ಕಾರ್ಯಾಲಯದಲ್ಲಿ
ಕರೆಯಲಾಗಿದ್ದ ಪುರಸಭೆ ಹಾಗೂ ಗ್ರಾಮಾಂತರದ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳ ಸಭೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಜಾಗೃತಿ ಬಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ತಹಶೀಲ್ದಾರರು ಮಳೆಗಾಲ ಆರಂಭವಾಗುತ್ತಿದ್ದು ಮುಂಜಾಗ್ರತೆಗಾಗಿ ವಾಂತಿಭೇದಿ ಪ್ರಕರಣಗಳು ಹರಡದಂತೆ ಮುಂಜಾಗ್ರತೆ ವಹಿಸಿ ತಾಲುಕಿನ ಎಲ್ಲಾ ನೀರಿನ ಮೂಲಗಳಾದ ವಾಟರ ಟ್ಯಾಂಕ್ ಬೋರ್ವೆಲ್ ಬಾವಿಗಳನ್ನು 15ದಿನಕ್ಕೊಮ್ಮೆ ಕ್ಲೋರಿನೇಷನ್ ಮಾಡಿಸಬೇಕು ಮತ್ತು ಎಲ್ಲ ನೀರಿನ ಮಾದರಿಗಳು ಸಹ 15 ದಿನಕ್ಕೊಮ್ಮೆ
ತಪಾಸಣೆ ಮಾಡಿಸಬೇಕು ಎಂದು ತಹಸಿಲ್ದಾರರು ಅಧಿಕಾರಿಗಳಿಗೆ ತಿಳಿಸಿದ್ದರು.ಈ ವೇಳೆಯಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಸಂಜೀವಕುಮಾರ ಪಾಟೀಲ್,ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚನ್ನಪ್ಪ ರಾಯಣ್ಣನವರ ಹಾಗೂ ಪುರಸಭೆ ಅಧಿಕಾರಿಗಳಾದ ಶರಣಯ್ಯ ಸ್ವಾಮಿ ತಾಲೂಕ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಾಗರಾಜ್ ಮನ್ನೇ,ತಾಲೂಕ ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಗಳಾದ ಶಿವಯೋಗಿ ಸಾಕ್ಪಲ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೀತಿ.ಸಯ್ಯದ್ ಮತ್ತು ಜಿಲ್ಲಾ ಕಾಲರಾ ನಿಯಂತ್ರಣ ಕಾರ್ಯಕ್ರಮದ ಮೇಲ್ವಿಚಾರಕರು ಹಾಗೂ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಮತ್ತು ತಾಲೂಕಿನ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.