ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆಯಿಂದ ಚುರುಕು ಕಾರ್ಯಚರಣೆ  

ಸಂಜೆವಾಣಿ ವಾರ್ತೆ

ಹರಿಹರ  ಜು 22:   ನಗರದಲ್ಲಿ ಡೆಂಗಿ ಜ್ವರ  ನಿಯಂತ್ರಣಕ್ಕಾಗಿ ಆರೋಗ್ಯ  ಇಲಾಖೆಯಿಂದ ಸರ್ವೆ ಮಾಡಲಾಯಿತು ಡೆಂಗ್ಯೂ ಜ್ವರ ಇಡೀ ಈಜಿಪ್ಟ್ ಎಂಬ ಸೊಳ್ಳೆಗಳಿಂದ ಹರಡುತ್ತದೆ ಇವು ವೈರಸ್ ನಿಂದ ಉಂಟಾಗುವ ಕಾಯಿಲೆಗಳು ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ ಸೊಳ್ಳೆ ಕಚ್ಚಿದ ಏಳು ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ಡೆಂಗಿ ಜ್ವರ ಮಾರಣಾಂತಿಕ ಕಾಯಿಲೆ ಈ ರೋಗವು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಎಂದುತಾಲೂಕ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಉಮ್ಮಣ್ಣ ಹೇಳಿದರು. ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಲಾರ್ವ ಸೊಳ್ಳೆ ಸಮೀಕ್ಷೆ ಕಾರ್ಯ ನಡೆಸಿ ಮಾತನಾಡಿದರುಸೊಳ್ಳೆಗಳು ಕಚ್ಚುವುದನ್ನು ತಡೆಯಲು ಆರೋಗ್ಯ ಇಲಾಖೆಯಿಂದ ಶಿಕ್ಷಣ ನೀಡಲಾಗುತ್ತಿದೆ ಹಗಲು ಹೊತ್ತಿನಲ್ಲಿ ನಿದ್ದೆ ಮಾಡುವ ಮಕ್ಕಳು ಮತ್ತು ವಿಶ್ರಾಂತಿ ಪಡೆಯುವ ಗರ್ಭಿಣಿಯರು ಹಾಗೂ ವಯಸ್ಸಾದರೂ ತಪ್ಪದೆ ಉಪಯೋಗಿಸಬೇಕು.ಡೆಂಗಿ ಜ್ವರದಿಂದ ನರಳುವ ರೋಗಿಗಳು ಸಹ ತಪ್ಪದೇ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು.ಮನೆ ಒಳಗೆ ಮತ್ತು ಮೇಲ್ಚಾವಣಿಯ ನೀರಿನ ತೊಟ್ಟಿ ಬ್ಯಾರಲ್ ಡ್ರಮ್ ತಪ್ಪದೆ ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ನೀರು ಭರ್ತಿ ಮಾಡಿ ಭದ್ರವಾಗಿ ಮುಚ್ಚಳದಿಂದ ಮುಚ್ಚುವುದುಒಡೆದ ಬಾಟಲಿ ಟಿನ್ ಟೈರು ಇತ್ಯಾದಿಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು.ಮನೆಯೊಳಗೆ ಏರ್ ಕೂಲರ್ ಹಾಗೂ ರೆಫ್ರಿಜರೇಟರ್ ಗಳಲ್ಲಿ ನೀರನ್ನು ಆಗಾಗ ಬದಲಾಯಿಸುತ್ತ ಇರಬೇಕು.ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂದರು.ಈ ಸಂದರ್ಭದಲ್ಲಿ .ಆರೋಗ್ಯ ನಿರಕ್ಷಣಾಧಿಕಾರಿ ದಾದಾಪೀರ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೃತಿ ಪೂಜಾರ್ ಮತ್ತು ಆಶಾ ಕಾರ್ಯಕರ್ತೆ ಇದ್ದರು