ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ತಂಡ ಬೇಟಿ

ಹರಿಹರ ಜ 14; ಡೆಂಗೆ, ಚಿಕುನ್‌ಗುನ್ಯಾ, ಮಲೇರಿಯಾ ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಲಾರ್ವಾ ಸಮೀಕ್ಷೆ ನಡೆದ ಹಿನ್ನೆಲೆಯಲ್ಲಿ ದೇವರ ಬೆಳಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯ ಮತ್ತು  ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.ಈ ವೇಳೆ ಜಿಲ್ಲಾ ಆರೋಗ್ಯ ಕೀಟ ಜನ್ಯ  ನಿಯಂತ್ರಣ  ಅಧಿಕಾರಿ ಡಾ. ನಟರಾಜ್ ಮಾತನಾಡಿ ಹರಿಹರ ದಾವಣಗೆರೆ ತಂಡ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಕೈಗೊಂಡು ಸೂಳ್ಳೆಯ ನಿಯಂತ್ರಣ ಕುರಿತು ಮಾಹಿತಿ ನೀಡಿ . ಡೆಂಗೆ ಮತ್ತು ಚಿಕೂನ್‌ಗುನ್ಯಾ ಇತರೆ ಸಾಂಕ್ರಾಮಿಕ ರೋಗಗಳು ಹರಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ರೋಗಳನ್ನು  ನಿಯಂತ್ರಣ ಮಾಡುವುದಕ್ಕೆ ಚಿಕಿತ್ಸೆ ಮತ್ತು ಇತರೆ ಕಾರ್ಯಗಳನ್ನು ಮಾಡಿದ ಹಿನ್ನೆಲೆಯಲ್ಲಿ ಮತ್ತೆ ನಮ್ಮ ತಂಡ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರಯೋಗಾಲಯಕ್ಕೆ ಮತ್ತು ಮೀನು ಸಾಗಾಣಿಕೆ ತೊಟ್ಟಿಗಳ ಪರಿಶೀಲನೆ ನಡೆಸಿ ವೈದ್ಯರು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆದು ರೋಗಗಳ ನಿಯಂತ್ರಣ ಕಾರ್ಯಕ್ಕೆ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ವೈದ್ಯಧಿಕಾರಿ ಡಾ. ಡಿ ಚಂದ್ರಮೋಹನ್. ಎಲ್ಲಾ ಆರೋಗ್ಯ ಇಲಾಖೆಯ ಮೇಲ್ವಿಚಾರಕ ರಾಜಪ್ಪ. ರಕ್ಷಣಾಧಿಕಾರಿ ಎಂ ಉಮಣ್ಣ. ವೈದ್ಯರಾದ ರೇವತಿ. ಸಿಬ್ಬಂದಿಗಳಾದ ಆದರ್ಶ. ರಾಮ ನಾಯಕ್. ಪೂಜಾ ದೀಪಾ. ಶಿವರಾಜ್ ಜಿಲ್ಲಾ ಮತ್ತು ತಾಲೂಕ್ ಮಟ್ಟದ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಇದ್ದರು