ಸಾಂಕೇತಿವಾಗಿ ರಾಷ್ಟ್ರೀಯ ಆಯುರ್ವೇದ ದಿನ ಆಚರಣೆ

ಬಾಗಲಕೋಟೆ,ನ.14 : ಕೋವಿಡ್-19 ಹಿನ್ನಲೆಯಲ್ಲಿ 5ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು “ಆಯುರ್ವೇದ ಪಾರ್ ಕೋವಿಡ್-19 ಪ್ಯಾಂಡಮಿಕ್” ಎಂಬ ಘೋಷ ವಾಕ್ಯದೊಂದಿಗೆÀ ಸಾಂಕೇತಿಕವಾಗಿ ನವನಗರದ ಜಿಲ್ಲಾ ಆಯುಷ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ಜಿಲ್ಲಾ ಆಯುಷ ಅಧಿಕಾರಿ ಡಾ.ಮಲ್ಲಣ್ಣ ತೋಟದ ಜ್ಯೋತಿ ಬೆಳಗಿಸುವುದರ ಮೂಲಕ ಆಚರಿಸಲಾಯಿತು. ದಿನಾಚರಣೆ ಅಂಗವಾಗಿ ಅಂತರಜಾಲದ ಮೂಲಕ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಾಗಲಕೋಟೆಯ ಬಿವಿವ ಸಂಘದ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಪ್ರಾದ್ಯಾಪಕರಾದ ಡಾ.ಸಿದ್ದಲಿಂಗಯ್ಯ ಕುದರಿ ಅವರು “ಆಯುರ್ವೇದ ಪಾರ್ ಕೋವಿಡ್-19 ಪ್ಯಾಂಡಮಿಕ್” ಕುರಿತು ಆನ್‍ಲೈನ್‍ನಲ್ಲಿ ಉಪನ್ಯಾಸ ನೀಡಿದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಆಯುಷ್ ವೈದ್ಯಾಧಿಕಾರಿಗಳು ಎ.ಎಫ್.ಐ ವೈದ್ಯರು, ಖಾಸಗಿ ವೈದ್ಯರು ಹಾಗೂ ಆಯುರ್ವೇದ ಮಹಾವಿದ್ಯಾಲಯದ ವೈದ್ಯರುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಚಂದ್ರಕಾಂತ ರಕ್ಕಸಗಿ, ಡಾ.ಶಿವಾನಂದ ನಿಡಗುಂದಿ, ಡಾ.ಎಮ್.ಬಿ.ಬೇವೂರ, ಡಾ|| ಪ್ರತಿಭಾ ಅರ್ಕಸಾಲಿ, ವಿನಾಯಕ ಅವ್ವಣ್ಣವರ, ಈರಮ್ಮ ಜಕನೂರ, ಶಿವಕುಮಾರ ಲಾಯದಗುಂದಿ, ಪ್ರವೀಣ, ಕೃಷ್ಣಾ ದೊಡಮನಿ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.