ಮಾನ್ವಿ,ಮೇ.೩೧-
ತಾಲೂಕಿನ ನೀರಮಾನವಿ ಆದರ್ಶ ಶಾಲೆ ಹಾಗೂ ಪ್ರಾಥಮಿಕ, ಫ್ರೌಡಯಲ್ಲಿ ನೂತನ ವರ್ಷದ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಜಿ ಹಂಪಯ್ಯ ನಾಯಕ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಹಾಲು ವಿತರಣೆಯ ಮೂಲಕ ಆರಂಭಿಸಿದರು.
ಉದ್ಘಾಟನೆ ಮಾಡಿ ಮಾತಾನಾಡಿದ ಶಾಸಕ ಆದರ್ಶ ಶಾಲೆಯೂ ನಮ್ಮ ಅವಧಿಯಲ್ಲಿ ಪ್ರಾರಂಭವಾಗಿ ಇಂದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತಿರುವುದು ತುಂಬಾ ಖುಷಿಯ ವಿಚಾರವಾಗಿದೆ ಮುಂದಿನ ದಿನಗಳಲ್ಲಿ ಇದಕ್ಕೆ ಬೇಕಾಗುವ ಸಲಹೆ ಮತ್ತು ಸಹಕಾರ ಖಂಡಿತವಾಗಿ ನಮ್ಮ ಕಡೆಯಿಂದ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ದೇವಯ್ಯ ಹಿರೇಮಠ, ಸಂಜೀವ್ ಸುಧಾಕರ, ಚನ್ನಬಸಪ್ಪ ಬೆಟ್ಟದೂರು, ಡಿಡಿಪಿಐ ಋಷಬೇಂದ್ರಯ್ಯ ಸ್ವಾಮಿ, ಲಕ್ಷ್ಮೀ ಶ್ರೀನಿವಾಸ, ಜಗದೀಶ್ ನಾಯಕ, ಸೇರಿದಂತೆ ಅನೇಕರು ಇದ್ದರು.