ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜನೆ 

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಮೇ.18 : ನಗರದ ವಿದ್ಯಾನಗರ ಬಡಾವಣೆಯಲ್ಲಿ ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಬೇಸಿಗೆ ಶಿಬಿರದ ವಿದ್ಯಾರ್ಥಿಗಳಿಗಾಗಿ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪೆನ್ಸಿಲ್ ಸ್ಕೆಚ್, ಆಯಿಲ್ ಪೇಂಟಿಂಗ್ ನಂತಹ ಪ್ರಕಾರಗಳಲ್ಲಿ ನಗರದ ವಿವಿಧ ಪ್ರತಿಷ್ಠಿತ ಶಾಲೆಗಳ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಸ್ಪರ್ಧೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಆಯಿಲ್ ಪೇಂಟಿಂಗ್ ವಿಭಾಗದಲ್ಲಿ ಭೂಮಿಕ ಕೆ.ಎಂ (ಪ್ರಥಮ), ಶ್ರೇಯ ಎಂ (ದ್ವಿತೀಯ), ಸೃಜನ್ ಕುಮಾರ್ (ತೃತೀಯ) ಮತ್ತು ಪೆನ್ಸಿಲ್ ಸ್ಕೆಚ್ ವಿಭಾಗದಲ್ಲಿ ಮೋನಿತಾ ಎಸ್ (ಪ್ರಥಮ), ತಿರುಮಲೇಶ್ ಹೆಚ್ ಎಸ್ (ದ್ವಿತೀಯ), ನವದೀಪ್ ಪಿ ಎಸ್ (ತೃತೀಯ) ಬಹುಮಾನ ಮತ್ತು ಕಿರಿಯ ವಿದ್ಯಾರ್ಥಿಗಳ ಆಯಿಲ್ ಪೇಂಟಿಂಗ್ ವಿಭಾಗದಲ್ಲಿ ಶ್ರೇಯ ಆರ್ (ಪ್ರಥಮ), ಹಿಮಬಿಂದು ಪಿ ಆರ್ (ದ್ವಿತೀಯ), ಸಿರಿ ಎಂ (ತೃತೀಯ) ಮತ್ತು ಪೆನ್ಸಿಲ್ ಸ್ಕೆಚ್ ವಿಭಾಗದಲ್ಲಿ ನಾಗಪ್ರಣತಿ ಎ ಹೆಚ್ (ಪ್ರಥಮ), ಮನೀಶ್ ಎ (ದ್ವಿತೀಯ), ಬೃಂದ ಎ ಎಸ್ (ತೃತೀಯ) ಬಹುಮಾನ ಪಡೆದುಕೊಂಡಿದ್ದು ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿ ಹಾಗು ಕಾರ್ಯದರ್ಶಿ ಚೈತ್ರ ಸಿ, ಸಂಸ್ಥೆಯ ನಿರ್ದೇಶಕರು ಮತ್ತು ಪೋಷಕರು ಅಭಿನಂದಿಸಿದ್ದಾರೆ.