ಸಹೋದರ ಸಹೋದರಿಯರ ಭಾವನಾತ್ಮಕ ಬೆಸುಗೆಯ ಹಬ್ಬವೆ ರಕ್ಷಾ ಬಂಧನ

ಕೆಂಭಾವಿ:ಸೆ.2:ಸೌಹಾರ್ದತೆ, ಐಕ್ಯತೆ, ಸಮಾನತೆ, ಭ್ರಾತೃತ್ವ, ಪ್ರೇಮ ಉಜ್ವಲಗೊಳಿಸಿ ಸಾಮರಸ್ಯ ಸಾರುವ ಹಬ್ಬವೇ ನೂಲು ಹುಣ್ಣಿಮೆಯೆಂದು ವರ್ತಕರಾದ ಸುಮಿತ್ರಪ್ಪ ಅಂಗಡಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಗುರುವಾರ ಸಂಜೆ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸರಳತೆಯಲ್ಲಿ ಹೃದಯವಂತಿಕೆ ಕಾಣುವ ರಾಖಿ ಹಬ್ಬ ಸಹೋದರ ಸಹೋದರಿ ಭಾವನಾತ್ಮಕ ಸಂಬಂಧದ ಬೆಸುಗೆ ಅಣ್ಣನ ಸಂರಕ್ಷಣೆ ಬಯಸಿ ತವರೂರು ತಣ್ಣಗಿರಲಿ ಎಂದು ಹಾರೈಸಿ ಆಚರಿಸುವ ಹಬ್ಬಗಳಲ್ಲಿ ಇದು ಒಂದು ಎಂದು ಹೇಳಿದರು.
ಉಪನ್ಯಾಸ ನೀಡಿದ ಶರಣಯ್ಯಸ್ವಾಮಿ ಹಿರೇಮಠ ಮಾತನಾಡಿ ಸಮಾಜದಲ್ಲಿ ಸಂಸ್ಕøತಿ, ಸಂಸ್ಕಾರ, ಸಭ್ಯತೆ, ಸೌಜನ್ಯ, ಪರಸ್ಪರ ಪ್ರೀತಿ ವಿಶ್ವಾಸ ಶ್ರದ್ಧೆ ಭಕ್ತಿ ಭಾವ ಕಣ್ಮರೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿ. ಅಜ್ಜ, ಅಜ್ಜಿ, ಅಪ್ಪ ಅಮ್ಮನಿಂದ ಪಾಠ ಕಲಿತ ಜನರೇ ಧನ್ಯರು ಎಂದು ಹೇಳಿದರು. ಕುಮಾರ ಉಲ್ಲಾಸ್ ಡಿಗ್ಗಾವಿಯಿಂದ ಪ್ರಜ್ಞಾ ಯೋಗ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತು. ಹಿರಿಯರಾದ ಲಿಂಗನಗೌಡ ಮಾಲಿ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೀಠಾಧಿಪತಿ ಶ್ರೀ ಷ ಬ್ರ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೇದಾರ ಯಾತ್ರಾರ್ಥಿ ಪ್ರಕಾಶ ಜಕ್ಕರಡ್ಡಿ ಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಗುಡದಯ್ಯ ದಾವಣಗೆರೆ ಮತ್ತು ರಮೇಶ ಸೊನ್ನದ ಅನ್ನದಾಸೋಹ ನೆರವೇರಿಸಿದರು. ಸಿದ್ದಲಿಂಗಸ್ವಾಮಿ ಹಿರೇಮಠ ಚಿಂಚೋಳಿ ಹಾಗೂ ಶಶಿಧರ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ತದನಂತರ ಶ್ರೀಮಠದಲ್ಲಿ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ ಶುಭಹಾರೈಸಿದರು.
ಇದೇ ವೇಳೆ ಚನ್ನಯ್ಯಸ್ವಾಮಿ ಚಿಕ್ಕಮಠ, ಡಾ ಎ ಜಿ ಹಿರೇಮಠ, ಹಳ್ಳಪ್ಪಗೌಡ ಪಾಟೀಲ್, ನಿಂಗನಗೌಡ ದೇಸಾಯಿ, ಡಿ ಸಿ ಪಾಟೀಲ್, ವೀರಣ್ಣ ಕಲಿಕೇರಿ, ಮೋಹನ ರೆಡ್ಡಿ ಡಿಗ್ಗಾವಿ, ಜಯಶ್ರೀ ಹಿರೇಮಠ, ಪವಿತ್ರ ವಡ್ಡೆ, ಉಮಾದೇವಿ ಪಾಟೀಲ್, ಡಾ ಯಂಕನಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.