ಸಹೋದರಿಗೆ ಅವಾಚ್ಯವಾಗಿ ಬೈಯ್ದುದ್ದೇಕೆ ಎಂದು ಪ್ರಶ್ನಿಸಿದಕ್ಕೆ ಯುವಕನ ಮೇಲೆ ಹಲ್ಲೆ

ಕಲಬುರಗಿ,ಅ.3-ಸಹೋದರಿಯನ್ನು ಅವಾಚ್ಯವಾಗಿ ಬೈಯ್ದುದನ್ನು ಪ್ರಶ್ನಿಸಿದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಗಾಜಿಪುರದ ಮೆಹತರಗಲ್ಲಿಯಲ್ಲಿ ನಡೆದಿದೆ.
ಮಹೇಶ ಭಾನುಪ್ರತಾಪ್ ರಿಡ್ಲಾನ್ (33) ಎಂಬ ಯುವಕನ ಮೇಲೆಯೇ ಹಲ್ಲೆ ನಡೆಸಲಾಗಿದ್ದು, ಗಾಯಗೊಂಡಿರುವ ಆತನನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅ.1 ರಂದು ರಾತ್ರಿ 11 ಗಂಟೆ ಸುಮಾರಿಗೆ ಮಹೇಶ ಮನೆಯ ಮುಂದೆ ವಾಯು ವಿಹಾರ ಮಾಡುತ್ತಿದ್ದಾಗ ವಿಕಾಶ ಬಿಡ್ಲಾನ್ ಮಹೇಶ ಸಹೋದರಿಗೆ ಅವಾಚ್ಯವಾಗಿ ಬೈಯ್ದಿದ್ದಾನೆ. ಮಹೇಶ ಇದನ್ನು ಪ್ರಶ್ನಿಸಿದಕ್ಕೆ ವಿಕಾಶ ಬಿಡ್ಲಾನ್, ಅವಿನಾಶ ಬಿಡ್ಲಾನ್, ವಿಕ್ಕಿ ಅಲಿಯಾಸ್ ಬಿಲ್ಡರ್ ವಿಕ್ಕಿ, ಭೀಮು ಟಾಕ್ ಮತ್ತು ರಾಹುಲ್ ಟಾಕ್ ಅವರು ಮಹೇಶ ಮೇಲೆ ಬಡಿಗೆ ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ವಿಕಾಶ ಬಿಡ್ಲಾನ್, ಅವಿನಾಶ ಬಿಡ್ಲಾನ್, ವಿಕ್ಕಿ ಅಲಿಯಾಸ್ ಬಿಲ್ಡರ್ ವಿಕ್ಕಿ, ಭೀಮು ಟಾಕ್ ಮತ್ತು ರಾಹುಲ್ ಟಾಕ್ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.