
ಚಿಟಗುಪ್ಪ :ಎ.7: ತಾಲೂಕಿನ ತಾಳಮಡಗಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಕೀರ್ತನ್ ತಂದೆ ಪ್ರಶಾಂತ್ ಬಿರಾದರ್ ತನ್ನ ಒಡಹುಟ್ಟಿದ ಸಹೋದರನ ಸಾವಿನಲ್ಲು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಘಟನೆ ನಡೆದಿದೆ ದಿನಾಂಕ 06/04/2023 ರಂದು ಸರಕಾರಿ ಪ್ರೌಢಶಾಲೆ ತಾಳಮಡಗಿ ,ತಾಲೂಕು ಚಟಗುಪ್ಪ ಜಿಲ್ಲೆ ಬೀದರ್ 10ನೇ ತರಗತಿಯ ಪರೀಕ್ಷಾ ಕೇಂದ್ರ ಸಂಖ್ಯೆ 060 SS ರಲ್ಲಿ ಕುಮಾರಿ ಕೀರ್ತನ ತಂದೆ ಪ್ರಶಾಂತ್ ಇವಳ ಒಡಹುಟ್ಟಿದ ಸಹೋದರ ಬೆಳಗಿನ ಜಾವ ಮರಣ ಹೊಂದಿದ್ದರು ತನ್ನ ದುಃಖದ ಮಡಿಲಿನಲ್ಲಿ ಸಹೋದರನ ಸಾವಿನಲ್ಲಿಯೂ ಇಂಗ್ಲೀಷ್ ಭಾಷೆಯ ಪರೀಕ್ಷೆ ಬರೆದು,ಮತ್ತೆ ತಮ್ಮನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದಳು, ಅವಳಿಗೆ ಒಬ್ಬನೇ ಸಹೋದರನಾಗಿದ್ದ.ಸದರಿ ಕುಟುಂಬದವರಿಗೆ ಶಾಲೆಯ ಮುಖ್ಯೋಪಾಧ್ಯಾಯರು ಪರೀಕ್ಷಾ ಕೇಂದ್ರದ ಮುಖ್ಯಸ್ಥರು ದೂರವಾಣಿ ಕರೆ ಮಾಡಿ ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ಬರಿಯುವಂತೆ ಸಲಹೆ ನೀಡಿದರು.ಅದರಂತೆ ಅವಳು ಅತ್ಯಂತ ದುಃಖದಲ್ಲಿದ್ದರೂ ಕೂಡ ಪರೀಕ್ಷೆ ಬರೆದು ವಿದ್ಯಾರ್ಥಿಗಳಿಗೆ ಮಾದರಿಯಾದಳು.