ಸಹೋದರತೆಯಿಂದ ಬಾಳೋಣ: ಪಾಟೀಲ

ಔರಾದ್:ಮೇ.2: ಸಹೋದರತೆಯ ಬಾಂಧವ್ಯ ಇಂದಿನ ಸಮಾಜದಲ್ಲಿ ಬಹಳ ಅವಶ್ಯಕತೆ ಇದ್ದು ಸಹೋದರತೆ ಇಂದ ಬಾಳೋಣ ಎಂದು ಸಮಾಜ ಸೇವಕ ಹಣಮಂತರಾವ ಪಾಟೀಲ ಹೇಳಿದರು.

ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಶುಕ್ರವಾರ ಮುಸ್ಲಿಂ ಬಾಂಧವರಿಗೆ ರಂಜನ್ ಹಬ್ಬದ ಉಪವಾಸದ ನಿಮಿತ್ತ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು ಕೊರೊನಾ ಕಾಲದಲ್ಲಿ ಎಲ್ಲರೂ ಜಾಗೃತಿಯಿಂದ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡೋಣ. ಈ ಸಮಾಜದಿಂದ ಕೊರೊನಾ ಮಾಹಾಮಾರಿ ಬೇಗ ತೋಲಗಲು ಸರ್ವರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಗ್ರಾಮದಲ್ಲಿ 40 ಹಣ್ಣು ಹಂಪಲು ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಫಿಯೋದ್ದಿನ್, ಎಂ. ಡಿ. ಫಯಾಜ್, ನಿಸಾರ್ ಅಹ್ಮದ್, ಮತಿನ್ ಪಾಂಪಡೆ, ಲಾಯಕಲಿ, ಅಲಿಮಪಾಶಾ ಆಫ್ರೋಜ ಸೌದಾಗರ, ಅಬ್ದುಲ್ ಅಸದ ಕೈಫ್, ರಿಯಾಜಪಾಶ ಕೊಳ್ಳೂರ, ಬಿಲಾಲ ಮುಲ್ಲಾ ಇದ್ದರು.