ಸಹಿ ಸಂಗ್ರಹ ನಡೆದಿಲ್ಲ: ಬೆಲ್ಲದ

ಧಾರವಾಡ, ಜೂ 7: ರಾಜ್ಯದಲ್ಲಿ ನಾಯಕತ್ವ ವಿಚಾರವಾಗಿ ಸಹಿ ಸಂಗ್ರಹಿಸಲಾಗಿತ್ತು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಬೆಲ್ಲದ ಅವರು ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೊಮ್ಮೆ ಸದನ ನಡೆದ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡುವ ವಿಷಯವಾಗಿ ಸಹಿ ಸಂಗ್ರಹ ಮಾಡಲಾಗಿತ್ತು. ಸಚಿವ ಈಶ್ವರಪ್ಪ ಅವರ ಇಲಾಖೆಗೆ ಸಂಬಂಧಿಸಿದಂತೆ 65 ಶಾಸಕರು ಸಹಿ ಮಾಡಿದ್ದರು. ಬಹುಷ: ಈಗ ಅದನ್ನೆ ಬಳಸಿರಬಹುದು. ಸಹಿಗಳು ಹಾಗೇ ಇದ್ದು, ಮೇಲೆ ಬೇರೆ ಪತ್ರ ಬಳಸಿರಬಹುದು. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆ ಮಾಡಿದಾಗ ಮಾತ್ರ ಗೊತ್ತಾಗುತ್ತದೆ. ಆದರೆ ನಾಯಕತ್ವ ವಿಚಾರವಾಗಿ ಯಾವುದೇ ಶಾಸಕರುಗಳಿಂದ ಸಹಿ ಸಂಗ್ರಹ ಅಭಿಯಾನ ನಡೆದಿಲ್ಲ. ಯಾರದೋ ಪರ ಮತ್ತು ವಿರೋಧ ಸಹಿ ಸಂಗ್ರಹ ಆಗಿಲ್ಲ ಎಂದು ಶಾಸಕ ಬೆಲ್ಲದ ನುಡಿದರು.