ಸಹಿ ಸಂಗ್ರಹ ಗೊತ್ತಿಲ್ಲ :ಶಾಸಕ ಜಿ.ಕರುಣಾಕರರೆಡ್ಡಿ

ಹರಪನಹಳ್ಳಿ.ಜೂ.೧೦:ಸಿಎಂ ಯಡಿಯೂರಪ್ಪನವರ ಪರ, ವಿರೋಧವಾಗಿ ಸಹಿ ಸಂಗ್ರಹ ಕುರಿತು ನನಗೆ ಮಾಹಿತಿ ಇಲ್ಲ, ನನಗೆ ಯಾರೂ ಸಹಿ ಮಾಡಿ ಎಂದು ಕೇಳಿಲ್ಲ, ನನ್ನ ಹತ್ತರ ಯಾರು ಬಂದಿಲ್ಲ ಎಂದು  ಶಾಸಕ  ಜಿ.ಕರುಣಾಕರರೆಡ್ಡಿ ತಿಳಿಸಿದ್ದಾರೆ.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ  ನಾನು ಯಾವತ್ತು ಪಕ್ಷದ ಪರ, ಯಡಿಯೂರಪ್ಪ ನಮ್ಮಸರ್ಕಾರದ ಸಿಎಂ ಎಂದು ಅವರು ನುಡಿದರು. 
ಯಡಿಯೂರಪ್ಪನವರೇ ಇನ್ನೂ  ಎರಡು ವರ್ಷ ಮುಂದುವರೆಯುತ್ತಾರೆಯೇ ಎಂಬ ಪ್ರಶ್ನೆಗೆ ಆ ಬಗ್ಗೆ ಹೇಳಲು ನಾನು ಜೋತಿಷಿ  ಎಂದು ಅವರು ಉತ್ತರಿಸಿದರು. ಕಳೆದ ವರ್ಷದಿಂದ ಕೋರೋನಾ  ಆವರಿಸಿದ್ದರೂ  ಕ್ಷೇತ್ರದ ಅಭಿವೃದ್ದಿ ಅಷ್ಚೇನು ಕುಂಠಿತವಾಗಿಲ್ಲ, ಕಳೆದ ಬಾರಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ೧೬ ಕೋಟಿ ರೂಪಾಯಿ ಅಭಿವೃದ್ದಿ ಕಾರ್ಯಕ್ಕೆ ಬಂದಿತ್ತು, ಈ ಬಾರಿ ಎಲ್ಲಾ ಅನುದಾನವನ್ನು  ಕೋವಿಡ್ ನಿಯಂತ್ರಣ ಕಾರ್ಯಕ್ಕೆ ವರ್ಗಾಹಿಸಲಾಗಿದೆ ಎಂದು ಅವರು ಹೇಳಿದರು.
ಹರಪನಹಳ್ಳಿ ಪಟ್ಟಣದಲ್ಲಿ ದಿನ ವಹಿ ಸಂತೆ ಮಾರುಕಟ್ಟೆ ಕಟ್ಟಡ ಅಭಿವೃದ್ದಿಗೆ ೨.೭೦ ಕೋಟಿ ರು. ಗೆ ಅನುಮೋದನೆ ದೊರೆತಿದ್ದು, ಶೀಘ್ರ ಟೆಂಡರ್ ಆಗುತ್ತದೆ. ತಾಲೂಕಿನಲ್ಲಿ ಕೋವಿಡ್ ಸೊಂಕು ಸಾಕಷ್ಟು ಇಳಿಮುಖವಾಗುತ್ತಿರುವುದು ಸಂತಸ ತಂದಿದೆ ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ, ಮುಖಂಡರಾದ ಆರ್ .ಲೋಕೇಶ, ರಾಘವೇಂದ್ರಶೆಟ್ಟಿ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಪುರಸಭಾ ಸದಸ್ಯರಾದ  ಕಿರಣ ಶಾನ್ ಬಾಗ್, ಜಾವೇದ್, ಯು.ಪಿ.ನಾಗರಾಜ,ನಿಟ್ಟೂರು ಸಣ್ಣ ಹಾಲಪ್ಪ ಎಂ.ಸಂತೋಷ,ಯುವ ಮುಖಂಡ ಶಿರಗಾನಹಳ್ಳಿ ವಿಶ್ವನಾಥ ಇತರರು ಉಪಸ್ಥಿತರಿದ್ದರು.