ಸಹಿ ಸಂಗ್ರಹಕ್ಕೆ ಬೆಲೆ ಇಲ್ಲವೆಂದ ಈಶ್ವರಪ್ಪ‌ ಸಿಎಂ ಬದಲಾವಣೆ ಬಗ್ಗೆ ಪರೋಕ್ಷ ಸುಳಿವು

ಬಳ್ಳಾರಿ ಜೂ 07 : ಶಾಸಕ ರೇಣುಕಾಚಾರ್ಯ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ವಿಷಯದಲ್ಲಿ ಶಾಸಕರ ಸಹಿ ಸಂಗ್ರಹಿಸುತ್ತಿರುವುದರ ಬಗ್ಗೆ ಉತ್ತರಿಸಿರುವ ಸಚಿವ ಈಶ್ವರಪ್ಪ ಅದಕ್ಕೆ ಮಹತ್ವ ಕೊಡಬೇಕಿಲ್ಲವೆಂದು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಗ್ರಾಸವಾಗೋ ರೀತಿಯಲ್ಲಿ ಹೇಳಿದ್ದಾರೆ.

ಕೊರೊನಾ, ನೆರೇಗಾ, ಸೇರಿದಂತೆ ವಿವಿಧ ವಿಷಯಗಳ ವಿಶೇಷ ಸಭೆ ಬಳಿಕ ಇಲ್ಲಿ‌ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು

ಬಿಜೆಪಿಯಲ್ಲಿ‌ ನಾಯಕತ್ವದ ಬಗ್ಗೆ ಶಾಸಕರಿಂದ ಸಹಿ ಸಂಗ್ರಹ ವ್ಯವಸ್ಥೆ ಇಲ್ಲ. ಆ ರೇಣುಕಾಚಾರ್ಯ ಹತ್ತು ಬಾರಿ ಹೇಳಿದ್ದನ್ನೇ ಹೇಳುತ್ತಾನೆ. ಸಹಿ ಸಂಗ್ರಹ ಮಾಡಿ ಎಂದು ಆತನಿಗೆ ಯಾರು ಹೇಳಿಲ್ಲ. ಬಿಜೆಪಿಯಲ್ಲಿ ಹೈಕಮೆಂಡ್ ನಿರ್ಣವೇ ಅಂತಿಮ. ಅವರು ಅಂದುಕೊಂಡಿದ್ದು ಮಾಡ್ತಾರೆ ಎಂದಿದ್ದಾರೆ.

ಕೊರೊನಾ ಕಡಿಮೆಯಾಗುತ್ತಿದೆ.
ಲಾಕ್ಡೌನ್ ತೆರವು ಗೊಳಸೋ ಬಗ್ಗೆ ಚರ್ಚೆ ನಡೆಯುತ್ತಿದೆ.
ಒಂದು ಕೋಟಿ ವ್ಯಾಕ್ಸಿನ್ ಬರೋದಿದೆ ಬಂದ ಮೇಲೆ ಅದನ್ನು ಜನರಿಗೆ ನೀಡಿದರೆ ಸೋಂಕು ನಿಯಂತ್ರಣಕ್ಕೆ ಬರಲಿದೆಂಬ ವಿಶ್ವಾಸ ವ್ಯಕ್ತಪಡಿಸಿದರು.