ಸಹಾಯ ಹಸ್ತ ನೀರಿಕ್ಷೆಯಲ್ಲಿ ಮಾಲಕರು

ಅರಕೇರಾ,ಏ.೨೯- ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಕಾಳವಿತ್ತು. ಈಗ ಅದು ಸರ್ವರ ಲಕ್ಷಣಾಗಿದೆ. ಏಕೆಂದರೆ ಒಬ್ಬರ ದುಡಿಮೆಯಲ್ಲಿ ಜೀವನಸಾಗಿಸಲಿಕ್ಕೆ ಆಗುತ್ತಿಲ್ಲ ಇಂದಿನ ದಿನಮಾನದಲ್ಲಿ ಬೆಲೆ ಗಗನಕ್ಕೇರುತ್ತಿರುವ ಕಾಲ ಘಟ್ಟಕದಲ್ಲಿ ಗಂಡ ಹೆಂಡತಿ ಇಬ್ಬರು ದುಡಿದರೂ ಸಂಸಾರ ಕುಟುಂಬ ನಿಭಾಯಿಸಲು ಕಷ್ಟವಾಗುತ್ತಿದೆ.
ಜಗತ್ತು ವಿಶಾಲವಾಗಿ ಬೆಳದಿದೆ ಕಷ್ಟಪಟ್ಟು ದುಡಿಯುತ್ತೇನೆ ಯಾವ ಕೆಲಸವಾಗಲಿ ಮಾಡುತ್ತೇನೆ ಎಂದು ಹೊರಡುವವರಿಗೆ ಉದ್ಯೋಗಕ್ಕೆ ಬರವಿಲ್ಲ.ಆದರೆ ನಾನು ಆಕೆಲಸ ಮಾಡಬೇಕಾ ಎಂದು ರಾಗ ಎಳೆಯುವವರು ಮಾತ್ರ ನಿರುದ್ಯೋಗಿಯಾಗಿಯೋ ಉಳಿದು ಬಿಡುತ್ತಾರೆ ಅಷ್ಟೇ ಅಲ್ಲದೇ ಕೆಲಸಕ್ಕಾಗಿ ಅಲೆಯುತ್ತಾ ದುಡಿಯುವ ವಯಸ್ಸನ್ನು ಕಳೆದುಕೊಳ್ಳುತ್ತಾರೆ.
೨೦೧೨ರಲ್ಲಿ ಬಾಬುರಾವ್ ಸಿತಾರ್ ಮಾಲೀಕತ್ವದಲ್ಲಿ ಜನ್ಮತಾಳಿದ ಈ ನಾಟಕ ಕಂಪನಿ ಶ್ರೀಅಗಸಿ ಬಸವೇಶ್ವರ ಸಂಘ ದೊಡ್ಡಸಗರ ಇವರು ದಶಕಗಳ ಕಾಲ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಪ್ರದರ್ಶನಗೊಳಿಸಿ ರಂಗಭೂಮಿ ಸೇವೆಯನ್ನು ನೀಡುತ್ತಾ ಪ್ರೇಕ್ಷಕರ ಮನಗೆದ್ದಿರುವ ಈಕಂಪನಿ ಇದಾಗಿದೆ.ಕಳೆದರಡು ವರ್ಷಗಳ ಹಿಂದಿನ ಕೋವೀಡ್ ೧೯ ಹಾಗೂ ಆದುನಿಕರಣ ಜಾಗತಿಕರಣದ ಪ್ರಭಾವದಿಂದ ಪ್ರೇಕ್ಷಕರನ್ನು ರಂಜಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಈ ನಾಟಕ ಕಂಪನಿ ಎನ್ನಿಸಿಕೊಂಡಿದೆ.
ಸ್ವಂತ ಜೀಮಿನು ವಸತಿ ಸೂರು ಇಲ್ಲದ ಈ ಕುಟುಂಬ ಒಮ್ಮೆ ಬಣ್ಣ ಹಚ್ಚಿಕೊಂಡು ಈ ಕ್ಷೇತ್ರದಲ್ಲಿ ಮುಖಮಾಡಿದರೆ ಸಾಕು. ನಮ್ಮ ಇನ್ನೂಳಿದ ಕ್ಷೇತ್ರದ ಬಗ್ಗೆ ನೆನಪಾಗುವುದಿಲ್ಲ. ಅಂದು ಮನರಂಜನೆ ಜತೆಗೆ ಜೀವನದಲ್ಲಿ ಹೇಗೆ ಬದುಕುಬೇಕೆಂದು ಹಾಗೂ ಸತ್ಯಘಟನೆಗಳನ್ನು ಪೌರಾಣಿಕ ಹಾಗೂ ಭಕ್ತಿಪ್ರಧಾನ ನೀತಿ ಪಾಠಗಳನ್ನು ನಿತ್ಯ ಜೀವನ ನಾಟಕಮಾಢಿಕೊಂಡು ಜೀವನಸಾಗಿಸುವದು ನಿತ್ಯದ ಕೆಲಸವಾಗಿದೆ. ನಮ್ಮ ಕುಟುಂಬವನ್ನು ಒಂದೋತ್ತಿನ ಊಟ ಮತ್ತು ಸಂಸಾರದ ನೌಕೆಯನ್ನು ಸಾಗಿಸಬೇಕೆಂಬ ಉದ್ದೇಶ ಪ್ರತಿಯೊಂದು ಗ್ರಾಮಕ್ಕೆ ಹೋಗಿ ಗ್ರಾಮಸ್ಥರ ಸಹಕಾರದೊಂದಿಗೆ ಬಣ್ಣ ಬಳಿದು ಪರದೆ ಮುಂದೆ ನಿಮತು ಕಲೆ ಪ್ರದರ್ಶಿ ಪ್ರೇಕ್ಷಕರನ್ನು ರಂಜಿಸುವ ಕೆಲಸ ನಮ್ಮದಾಗಿದೆಂದು ಮಾಲಿಕ ಬಾಬುರಾವ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸುಮಾರು ೧ತಿಂಗಳಿಂದ ಅರಕೇರಾ ಪಟ್ಟಣಕ್ಕೆ ಬಂದು ನಾಟಕ ವಾಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದವೀ ಆದರೇ ಚುನಾವಣೆ ಇದೇ ಚುನಾವಣೆ ಆದಮೇಲೆ ನೀವು ಪ್ರಾರಂಭ ಮಾಡಬಹುದು ಎಂದು ಹೇಳಿದ್ದಾರೆ.ಒಟ್ಟಾರೆ ಎಲ್ಲಾ ಸಿದ್ದೇತೆಯನ್ನು ಮಾಡಿಕೊಂಡು ಪ್ರಧರ್ಶನಮಾಡುವುದೊಂದೆ ಬಾಕಿಇದ್ದಾಗ ಏಕಾ ಏಕಾಕಿ ಕಳೆದು ಎರಡು ಮೂರು ದಿನಗಳಿಂದ ಗಾಳಿ ಸಿಡುಲು ಗುಡುಗು ಆಣೇಕಲ್ ಬಾರಿ ಮಳೆಯಿಂದ ತೈಯಾರಗೊಂಡಿರುವ ಟೇಜ್ ಸಂರ್ಪೂಣ ಗಾಳಿಗೆ ಟಿನ್ನುಗಳು ಬಂಬೂಗಳು ಬಟ್ಟೆಗಳು ಮಳೆಯಿಂದ ಹಾಗೂ ಬಾರಿಗಾಳಿಗೆ ಎಲ್ಲಾವೂ ಮುರಿದುಹೋಗಿದ್ದು ಈ ಕುಟುಂಬ ಸದ್ಯ ಈಗ ಬೀದಿಗೆ ಬಂದಿದೆ.ಚುನಾವಣೆಯ ಮುಗಿದ ಬಳಿಕ ನಾಟಕ ಪ್ರದರ್ಶನಮಾಡಲು ತಮ್ಮಲ್ಲಿರುವ ಸಾಮಾಗ್ರಿಗಳು ಗಾಲಿಗೆ ಟಿನ್ನುಗಳು ಮೂರಿದು ಬಿದ್ದಿವೆ ಬಂಬೂಗಳು ಸಹ ಮುರಿದಿವೆ ಸ್ಕ್ರೀನ್ ಬಟ್ಟೆಗಳು ಸಂಪೂರ್ಣ ಹರಿದುಹೊಗಿದ್ದರಿಂದ ಈ ಕುಟುಂಬಕ್ಕೆ ಮಳೆಯಿಂದ ಬಳಷ್ಟು ನಷ್ಟಗೊಂಡದೆ.
ಸುಮಾರು ೧೦-೧೫ ಜನ ಈ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಇವರಿಗೆ ಸೂರು ಇಲ್ಲದೇ ಊಟಕ್ಕೆ ಇರದೇ ತೊಂದರೆ ಅನುಭವಿಸುವಂತ ಪರಿಸ್ಥಿತಿ ಈಕಂಪನಿಯವರಿಗೆ ಒದಾಗಿ ಬಂದಿದೆ. ಸಹಾಯ ಹಸ್ತದ ನೀರಿಕ್ಷೆಯಲ್ಲಿದ್ದಾರೆ.ಯಾರಾದರೂ ದಾನಿಗಳು ಸರಕಾರ,ಜನಪ್ರತಿಗಳು ಮುಂದೆ ಬಂದು ಇವರಿಗೆ ಸಹಾಯ ಹಸ್ತದ ನೀಡುವಂತೆ ವಿನಂತಿಸಿದ್ದಾರೆ.