ಸಹಾಯ ಮಾಡಿ ಬದುಕಲ್ಲಿ ಸಾರ್ಥಕತೆ ಕಾಣಿ

ಕೋಲಾರ,ಸೆ,೧೪:ಉತ್ತಮ ಆರೋಗ್ಯವಂತರು ಅಗತ್ಯ ಸೌಲಭ್ಯಗಳ ಅವಶ್ಯಕತೆ ಇರುವವರಿಗೆ ನಾವು ನೀವು ಸೇರಿ ಸಹಾಯಮಾಡುವ ಮೂಲಕ ಜೀವನದಲ್ಲಿ ತೃಪ್ತಿ ಕಾಣಬೇಕು ಎಂದು ಸ್ಕೌಟ್ಸ್- ಗೈಡ್ಸ್ ಜಿಲ್ಲಾ ಸಂಸ್ಥೆ ಮುಖ್ಯ ಆಯುಕ್ತ ಕೆ.ವಿ. ಶಂಕರಪ್ಪ ತಿಳಿಸಿದರು.
ಕೋಲಾರ ನಗರದ ಸ್ಕೌಟ್ ಭವನದ ಆವರಣದಲ್ಲಿ ದಿ ಅಸೋಸಿಯನ್ ಆಫ್ ದಿ ಪೀಪಲ್ ವಿತ್ ಡಿಸೆಬಿಲಿಟಿ ಬೆಂಗಳೂರು, ಹೆಚ್,ಸಿಲ್ ಪೌಂಡೆಷನ್, ಜಿಲ್ಲಾ ಸ್ಕೌಟ್ಸ್- ಗೈಡ್ಸ್ ಸಂಸ್ಥೆ ಕೋಲಾರ ಮತ್ತು ರೋಟರಿ ಕೋಲಾರ ನಂದಿನಿ ವತಿಯಿಂದ ಬೆನ್ನುಹುರಿ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಿ ಮಾತನಾಡುತ್ತಾ. ಸಮಾಜದ ಪ್ರತಿಯೊಬ್ಬರು ಆರೋಗ್ಯವಂತರಾಗಬೇಕು ಆರೋಗ್ಯದಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ ವಿಶೇಷ ಚೇತನರಿಗೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ತಲುಪಬೇಕು, ರೋಟರಿ ಮತ್ತು ಸ್ಕೌಟ್ಸ್- ಗೈಡ್ಸ್ ಸಂಸ್ಥೆಯಿಂದ ಕೈಲಾದಷ್ಟು ಸಹಕಾರ ನೀಡಲು ಸದಾ ಸಿದ್ದ ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ಮುನಿರಾಜು ರವರು ಮಾತನಾಡಿ ಸರ್ಕಾರದಿಂz ತಮಗೆ ಸೇರಬೇಕಾದ ಎಲ್ಲಾ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಲು ನಾವು ಸದಾ ಸಿದ್ದ. ತಮ್ಮ ವ್ಯಾಪ್ತಿಯಲ್ಲಿನ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಇಲಾಖೆಗೆ ಬೇಕಾದ ದಾಖಲೆಗಳನ್ನು ನೀಡಿ ಅಗತ್ಯ ಸಲಕರಣೆಗಳಗನ್ನು ಪಡೆಯಬಹುದು. ಇಲಾಖೆ ತಮ್ಮ ಸೇವೆಗೆ ಸದಾಸಿದ್ದ ತಾವು ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಸ್ಕೌಟ್ ಆಯುಕ್ತರಾದ ಕೆ,ಆರ್ ಸುರೇಶ್ ಜಿಲ್ಲಾ ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ಧರ್ಮಸ್ಥಳ ಸಂಘದ ಸಂಯೋಜಕರಾದ ಸಿದ್ದಗಂಗಯ್ಯ, ಸಂಘದ ಪದಾಧಿಕಾರಿಗಳಾದ ಚನ್ನಕೃಷ್ಣಪ್ಪ, ಜೋಸೆಫ್, ಪ್ರಶಾಂತ್, ಜಿಲ್ಲಾ ಸಂಯೋಜಕಿ ಸುಧಾ ಮುಂತಾದವರು ಉಪಸ್ಥಿತರಿದ್ದರು.