ಸಹಾಯ ಪ್ರಾದ್ಯಾಪಕರ ಹುದ್ದೆ ಆಯ್ಕೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಹಿರೇಮಠ ಆರೋಪ

ಕಲಬುರಗಿ:ಸೆ.11: ಇತ್ತೀಚಿಗೆ ಸಹಾಯ ಪ್ರಾಧ್ಯಾಪಕರ ಹುದ್ದೆ ಆಯ್ಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿರುವ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವೆಸುಗುಂತೆ ಸರಕಾರ ಹಾಗೂ ಪ್ರಾಧಿಕಾರದ ಕೇಲವು ಅಧಿಕಾರಿಗಳು ಸೇರಿಕೊಂಡು ಕಲ್ಯಾಣ ಕರ್ನಾಟಕಕ್ಕೆ ದೊರಕಿರುವ 371( ಜೆ) ಮೀಸಲಾತಿಯನ್ನು ಒಳಸಂಚಿನ ಮೂಲಕ ಆಂತರಿಕವಾಗಿ ಕಸೀದುಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆಂದು ಆರ್ ಎಮ್ ಹಿರೇಮಠ ಅವರು ಆರೋಪ ಮಾಡಿದ್ದಾರೆ.

ರಾಜ್ಯ ಮೇರಿಟನಲ್ಲಿ ಹೆಚ್ಚು ಅಂಕ ಗಳಿಸಿರುವ ಅಭ್ಯರ್ಥಿಗಳನ್ನು ಮೊದಲು ರಾಜ್ಯ ಮಟ್ಟದ ಜನರಲ್ ಕೆಟಗಿರಿಗೆ ಮೊದಲು ಆಯ್ಕೆ ಮಾಡಬೇಕು ಆನಂತರವೇ ಮಿಕ್ಕುಳಿದ ಹುದ್ದೆಗಳಿಗೆ ಮೀಸಲಾತಿಗೆ ಅನುಗುಣವಾಗಿ ಆಯ್ಕೆ ನಡೆಸಬೇಕು ಆದರೆ ಪ್ರಾದಿಕಾರವು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ವಂಚಿಸುವ ಲೆಕ್ಕದಲ್ಲಿ ಪರೀಕ್ಷೆಗೆ ಮೊದಲೆ ಅಭ್ಯರ್ಥಿಗಳಲ್ಲಿ ನೀವು ಕಲ್ಯಾಣ ಕರ್ನಾಟಕ ಭಾಗ ಸ್ಥಳಿಯ ಹುದ್ದೆಗೆ ಆಯ್ಕೆ ಬಯಸುವಿರಾ? ಅಥವಾ ಕರ್ನಾಟಕದ ಮಿಕ್ಕುಳಿದ ವೃಂದಕ್ಕೆ ಆಯ್ಕೆ ಬಯಸುವಿರಾ? ಎಂದು ಕೇಲುವ ಮೂಲಕ ಸಂವಿಧಾನದಲ್ಲಿ ತಿಳಿಸಲಾದ ಮೀಸಲಾತಿಯನ್ನು ಕಿತ್ತುಕೊಳ್ಳಲು ಯತ್ನಿಸಿದ್ದು, ಈ ಕೂಡಲೆ ಹಿಂತಹ ಆಯ್ಕೆಯನ್ನು ಕರ್ನಾಟಕ ಪ್ರಾದಿಕಾರವು ಕೈಬೀಡಬೇಕು ಇಲ್ಲದಿದ್ದರೆ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಸರಕಾರದ ವಿರುದ್ದ ಹಾಗು ಪ್ರಾಧಿಕಾರದ ವಿರುದ್ದ ಹೋರಾಟ ಮಾಡುವದು ಅನಿವಾರ್ಯವೆಂದು ಅವರು ಸರಕಾರಕ್ಕೆ, ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಎಚ್ಚರಿಗೆ ನೀಡಿದ್ದಾರೆ.

ಮೀಸಲಾತಿ ಎಂಬುವದು ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿರುವ ಸೌಲಭ್ಯವಾಗಿದ್ದು ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೀಸಲಾತಿ ನಮಗಿದ್ದು ಅದನ್ನು ಆನಂತರಿಕವಾಗಿ ಉತ್ತರ ಕರ್ನಾಟಕದ ಕೇಲವು ಅಧಿಕಾರಿಗಳು ಕುತಂತ್ರ ಮಂತ್ರಿಗಳು ನಮ್ಮ ಭಾಗದ ಹಕ್ಕನ್ನು ಕಿತ್ತಿಕೊಳ್ಳಲು ನಿರಂತರ ಹುನ್ನಾರ ನಡೆಸುತ್ತಿದ್ದು ಅದು ಎಂದಿಗೂ ಕೂಡಾ ಇಡೇರದ ಕನಸ್ಸು ಎಂದು ಅವರು ತಿಳಿಸಿದರು.

ಯಾವ ರೀತಿ ಎಸ್ ಸಿ, ಎಸ್ಟಿ ವರ್ಗಕ್ಕೆ ಮೀಸಲಾತಿ ಸೌಲಭ್ಯವಿದಿಯೋ ಅದೇ ರೀತಿ ಕಲ್ಯಾಣ ಕರ್ನಾಟಕಕ್ಕೂ ಮೀಸಲಾತಿ ಇದ್ದು ನೀವು ಇಲ್ಲೆ ಆಯ್ಕೆ ಕೋರಬೇಕು ಎಂದು ಕೇಲುವ ಅಧಿಕಾರವಾಗಲಿ ಅಥವಾ ನಿಯಮವಾಗಲಿ ಸಂವಿಧಾನದಲ್ಲಿ ಎಲ್ಲೂ ಇಲ್ಲಾ ಕಲ್ಯಾಣ ಕರ್ನಾಟಕ ಬಾಗದ ಅಭ್ಯರ್ಥಿಗಳು ರಾಜ್ಯ ಮೇರಿಟನಲ್ಲಿ ಹೆಚ್ಚು ಅಂಕ ಪಡೆದರೆ ಅವರನ್ನು ರಾಜ್ಯ ಜನರಲ್ ಮೇರಿಟನಲ್ಲಿ ಆಯ್ಕೆ ಮಾಡಬೇಕು ಅದು ಬಿಟ್ಟು ಸ್ಥಳಿಯ ಹುದ್ದೆಗೆ ಆಯ್ಕೆ ಮಾಡಿದರೆ ಇಲ್ಲಿರುವ ಹಿಂದುಳಿದ ಹಾಗೂ ಮೀಸಲಾತಿ ಕೋರುವ ಮಕ್ಕಳಿಗೆ ಅನ್ಯಾಯವಾಗುತ್ತದೆ ಆದ್ದರಿಂದ ಸಹಾಯ ಪ್ರಾಧ್ಯಾಪಕರ ಹುದ್ದೆ ಪ್ರಕ್ರೀಯೇ ಸಂವಿಧಾನ ಬದ್ದವಾಗಿ ನಿಯಮ ಬದ್ದವಾಗಿ ಆಯ್ಕೆ ಮಾಡಲು ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ತಿಳಿಸಿದ್ದಾರೆ.