ಸಹಾಯ ಧನಕ್ಕೆ ಅರ್ಜಿ: ಆಟೋ, ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಉಚಿತ ಆನ್ ಲೈನ್ ಅಪ್ಲಿಕೇಶನ್

ಮೈಸೂರು, ಮೇ.28: ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ವತಿಯಿಂದ ಆಟೋ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗಾಗಿ ರಾಜ್ಯ ಸರ್ಕಾರ ಘೋಷಿಸಿರುವ ರೂ 3000/- ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಉಚಿತ ಸಹಾಯ ಕೇಂದ್ರ ಪ್ರಾರಂಭ ಮಾಡಿ ಚಾಲನೆ ಕಾರ್ಯಕ್ರಮದಲ್ಲಿ 60 ಕ್ಕೂ ಹೆಚ್ಚು ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರು ಉಚಿತವಾಗಿ ಆನ್ ಲೈನ್ ಅಪ್ಲಿಕೇಶನ್ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ರವರು ಕೊರೋನಾ ಸಂಕಷ್ಟದ ಸಮಯದಲ್ಲಿ ಆಟೋ ಚಾಲಕರು ,ಕಲಾವಿದರು, ಕಟ್ಟಡ ಕಾರ್ಮಿಕರಿಗೆ ಆಗಿರಬಹುದು ಇನ್ನೂ ಅನೇಕ ಕಡುಬಡವರಿಗೆ ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ತಲಾ 3000 ಪರಿಹಾರವನ್ನು ನೀಡಿರುವುದು ಶ್ಲಾಘನೀಯ ಹಾಗೂ ಆಟೋ ಚಾಲಕರು ಪರಿಹಾರದ ಅರ್ಜಿಯನ್ನು ಪಡೆದುಕೊಂಡು ದಯವಿಟ್ಟು ಮನೆಯಲ್ಲಿ ಇದ್ದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಮೈಸೂರು ನಗರ ಉಪಾಧ್ಯಕ್ಷರಾದ ಶ್ರೀ ಟಿ. ರಮೇಶ್ ರವರು ಮಾತನಾಡಿ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಲೋಹಿತ್ ರವರ ನೇತೃತ್ವದ ತಂಡ ಕರೋನದ ಸಂಕಷ್ಟದ ನಡುವೆಯೂ ಅನೇಕ ಜನಪರ ಕೆಲಸಗಳು ಮತ್ತು ಸರ್ಕಾರದಿಂದ ಬರುವ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸಗಳು ಉಚಿತವಾಗಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಆದರೆ ಆಟೋ ಚಾಲಕರು ಮತ್ತು ಕ್ಯಾಬ್ ಡ್ರೈವರ್ ಗಳು ನಿಮ್ಮ ಆರೋಗ್ಯದ ದೃಷ್ಟಿಯಿಂದ ಮನೆಯಲ್ಲೇ ಇದ್ದು ಲಾಕ್ ಡೌನ್ ಸಹಕರಿಸಿ ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್ ರವರು ನಗರಪಾಲಿಕೆ ಸದಸ್ಯರಾದ ಸಾತ್ವಿಕ್ ಸಂದೇಶ್ ಸ್ವಾಮಿ ರವರು, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ವೇಲು,ಹಾಗೂ ಮಾಜಿ ನಗರಪಾಲಿಕೆ ಸದಸ್ಯರಾದ ಸು.ಮುರುಳಿ,ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ,ಮುಂತಾದವರು ಉಪಸ್ಥಿತರಿದ್ದರು.