ಸಹಾಯಧನ ಸಾಲಕ್ಕೆ ಜಮೆ ಮಾಡದಿರಲು ಮನವಿ

ಲಕ್ಷ್ಮೇಶ್ವರ, ಮೇ21: ಲಕ್ಷ್ಮೇಶ್ವರ ತಾಲೂಕ ಭಾರತೀಯ ಕಿಸಾನ್ ಸಂಘದ ವತಿಯಿಂದ ರೈತರಿಗೆ ಬಂದ ಬೆಳೆ ಹಾನಿ ಪರಿಹಾರ ಬೆಳೆ ವಿಮೆ ಸೇರಿದಂತೆ ಯೋಜನೆಗಳ ಸಹಾಯಧನವನ್ನು ಬ್ಯಾಂಕಿನವರು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದು ನಿಲ್ಲಿಸುವಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಲು ಆಗ್ರಹಿಸಿ ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ ಶಿಗ್ಲಿ ಕೆನರಾ ಬ್ಯಾಂಕಿನ ಅಧಿಕಾರಿಗಳು ರೈತರಿಗೆ ಬಂದ ಬೆಳೆ ಪರಿಹಾರ ಬೆಳೆ ವಿಮೆ ಪಿಎಂ ಕಿಸಾನ್ ಯೋಜನೆ ನರೇಗಾ ಗೃಹಲಕ್ಷ್ಮಿ ಅನ್ನಭಾಗ್ಯ ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ಟಾಕಪ ಸಾತಪೂತೆ ಅವರು ಬ್ಯಾಂಕುಗಳು ಸಾಲ ವಸೂಲಾತಿಗಾಗಿ ನೋಟಿಸ ನೀಡುತ್ತಿದ್ದು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಕಳೆದ ಎರಡು ವರ್ಷಗಳಿಂದಲೂ ಅತ್ಯಂತ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಅತಿವೃಷ್ಟಿ ಅನಾವೃಷ್ಟಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ಇಂತಹ ಕಠಿಣ ಸಂದರ್ಭದಲ್ಲಿ ಬ್ಯಾಂಕಿನವರು ನೀಡುತ್ತಿರುವ ಕಿರುಕುಳ ಮತ್ತು ಸರ್ಕಾರದ ಯೋಜನೆಗಳು ಯಾವುದೇ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ನಿರ್ದೇಶನ ನೀಡಬೇಕು ಎಂದು ಮನವಿ ಪತ್ರವನ್ನು ತಹಶೀಲ್ದಾರ್ ಮಂಜುನಾಥ ಅಮಾಸಿಯವರಿಗೆ ನೀಡಿದರು. ಮನವಿ ಪತ್ರ ಗ್ರೇಡ್ 2 ತಹಶೀಲ್ದಾರ ಮಂಜುನಾಥ್ ಅಮಾಸಿಯವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೈತರಾದ ಭದ್ರಪ್ಪ ಇಳಗೇರ ಷಣ್ಮುಖಪ್ಪ ಹೆಸರೂರ ಅಜಯ್ ಕರಿ ಗೌಡ್ರ ದೊಡ್ಡೇರ್ ಬಸಾಪುರ ಮುತ್ತಪ್ಪ ಕಡಣ್ಣವರ ನೀಲಕಂಠಪ್ಪ ಕನೋ ಜಿ ಗಂಗಾಧರ್, ಕೋಡಳ್ಳಿ ಶಿವಪ್ಪ ಗಡಿಬಿಡಿ ಬಾಪುನಗೌಡ ಪಾಟೀಲ ಕರಿಯಪ್ಪ ಹುರುಕನವರ ರಮೇಶ್ ಹುಲಕೋಟಿ ನಾಗರಾಜ ಪಾಟೀಲ ರಾಜು ನೆರ್ಲೆ ಸೇರಿದಂತೆ ಅನೇಕರು ಇದ್ದರು.