ಸಹಾಯಧನ ಚೆಕ್ ವಿತರಣೆ

ಬಾದಾಮಿ,ಜೂ23: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳ ಇವರ ವತಿಯಿಂದ ತಾಲೂಕಿನ ಹೊಸೂರ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಸಮಿತಿಗೆ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ 1.50.000(ಒಂದು ಲಕ್ಷ ಐವತ್ತು ಸಾವಿರ) ರೂ ಗಳನ್ನು ಚೆಕ್‍ನ್ನು ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯಾನ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ಯೋಜನಾಧಿಕಾರಿ ಮಾಂತೇಶ ನಾಗಶೆಟ್ಟಿ, ಮೇಲ್ವಿಚಾರಿಕ ಅಮ್ಮಣ್ಣ ಬಾಗೇವಾಡಿ, ಗ್ರಾಮ ಒಕ್ಕೂಟ ಅಧ್ಯಕ್ಷ ವಿಜಯಲಕ್ಷ್ಮಿ ವಡ್ಡರ, ಶ್ರೀ ಮಹರ್ಷಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ.ಟಿ.ಇಸರನಾಳ, ಮುಖಂಡರಾದ ನಾಗನಗೌಡ ಮೇಟಿ, ರಾಮಣ್ಣ ಹಳೆಪೇಟಿ, ಸಾಂತಗೌಡ ಬಿಳೆಕಲ್, ರುದ್ರಯ್ಯ ಹಿರೇಮಠ, ನಾಗೇಶ ಅಕ್ಕಿ, ಶರಣಯ್ಯ ಬದ್ರಿ, ಆನಂದ ಪೂಜಾರ, ಮಂಜಪ್ಪ ಇಸರನಾಳ, ಸೋಮಣ್ಣ ಸಜ್ಜನ, ಸವಿತಾ ಚಕ್ರಸಾಲಿ, ಶೋಭಾ ಗಾರವಾಡ, ಹಾಗೂ ಸಮಾಜದ ಎಲ್ಲಾ ಹಿರಿಯರು ಹಾಗೂ ಹೊಸೂರ ಗ್ರಾಮದ ಹಿರಿಯರು ಭಾಗವಹಿಸಿದ್ದರು.