ಸಹಾಯಧನಕ್ಕೆ ಕಲಾವಿದರ ಸಂಘ ಒತ್ತಾಯ

ರಾಯಚೂರು.ನ.09- ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ವತಿಯಿಂದ ಧನಸಹಾಯ ಮಾಡಬೇಕೆಂದು ವಿಜಿ ಕಲಾವಿದರ ಸಂಘ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಂಗ ಪರಿಷತ್‌ಗೆ ಕಳೆದ ಮೂರು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯವನ್ನು ನೀಡುತ್ತಿದ್ದು , ಈ ವರ್ಷ ಇನ್ನು ಧನಸಹಾಯ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿರುವುದಿಲ್ಲ . ಕರ್ನಾಟಕ ರಂಗ ಪರಿಷತ್ ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಸಾವಿರಾರು ಸಂಘ ಸಂಸ್ಥೆಗಳು ಹಾಗೂ ಕಲಾವಿದರು ಧನಸಹಾಯಕ್ಕಾಗಿ ಕಾಯುತ್ತಿದ್ದಾರೆ . ಹಿಂದಿನ ಸರ್ಕಾರದಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಉದ್ದಟತನದಿಂದ ವರ್ತಿಸಿ ಕಲಾವಿದರು ಕಳ್ಳರೆಂದು ನಿಂದಿಸಿ ಧನಸಹಾಯವನ್ನು ನಿಲ್ಲಿಸಲು ಪ್ರಯತ್ನಿಸಿದರು .
ನಂತರ ಬಂದಂತಹ ಈಗಿರುವ ಸರ್ಕಾರ ಮೊದಲಿನಂತೆಯೆ ಧನಸಹಾಯಕ್ಕೆ ಅರ್ಜಿಗಳನ್ನು ಕರೆದು, ಧನಸಹಾಯವನ್ನು ಬಿಡುಗಡೆ ಮಾಡಿತ್ತು. ಆದರೆ. ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ಬಿಡುಗಡೆಯಾಗಿರಂತಹ ಬಹುಭಾಗ ಹಣವನ್ನು ಸಂಘ ಸಂಸ್ಥೆಗಳಿಗೆ ನೀಡದೇ ತಡೆಹಿಡಿಯಿತು ಆದರೆ ಎಲ್ಲಾ ಕಲಾವಿದರಿಗೆ ಕೊರೊನಾ ಕಷ್ಟಕಾಲದಲ್ಲಿ ಕೂಡ ಕಲಾವಿದರಿಗೆ ನೆರವಾಗಿ ನಿಲ್ಲಬೇಕಾದ ಸರ್ಕಾರ ಏನುಮಾಡಿರುವುದಿಲ್ಲ ಆದರೆ ಒಂದಿಷ್ಟು ಕಲಾವಿದರಿಗೆ 2000 ರೂ ಕೊಟ್ಟಿರುತ್ತೇವೆ ಎನ್ನುವ ರೀತಿಯಲ್ಲಿ ಕೊಟ್ಟಿರುತ್ತಾರೆ .
ಕಳೆದ ಎರಡು ವರ್ಷಗಳಿಂದ ಧನಸಹಾಯಕ್ಕಾಗಿ ಕರೆಯದೆ ಇರುವ ಕಾರಣದಿಂದ ಬಹಳಷ್ಟು ಕಲಾವಿದರು ಕಷ್ಟ ದಿನಗಳನ್ನು ಎದುರಿಸುತ್ತಿದ್ದಾರೆ ಆಗಾಗಿ ಸರ್ಕಾರ ಈ ಕೂಡಲೆ ಈ ವರ್ಷ 2020-21 ನೇ ಸಾಲಿನಲ್ಲಿ ಧನಸಹಾಯಕ್ಕಾಗಿ ಹಣವನ್ನು ತೆಗೆದಿರುವುದು ಹೇಗೆ ಎಂದು ತಿಳಿದು ಬಂದಿಲ್ಲ ಈವರೆಗೂ ಸಂಘ ಸಂಸ್ಥೆಗಳಿಂದ ಮತ್ತು ಕಲಾವಿದರಿಂದ ಧನಸಹಾಯಕ್ಕಾಗಿ ಅರ್ಜಿಗಳನ್ನು ಕರೆದಿರುವುದಿಲ್ಲ .ಕಲೆಯನ್ನೆ ನಂಬಿ ಬದುಕುತ್ತಿರುವ ಲಕ್ಷಾಂತರ ಕಲಾವಿದರ ಬದುಕು ಅತಂತ್ರರ ಪರಿಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಇವುಗಳು ದಯವಿಟ್ಟು ಸಂಘ ಸಂಸ್ಥೆಗಳಿಗೆ ಮತ್ತು ಕಲಾವಿದರಿಗೆ ಧನಸಹಾಯ ಹಾಗೂ ಪ್ರಾಯೋಜನೆಗಳನ್ನು ನೀಡಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೋಸೆಫ್, ವೆಂಕಟೇಶ ಆಲ್ಕೋಡ್, ರಂಗಸ್ವಾಮಿ,ಲಕ್ಷ್ಮಣ್ ಮಂಡಲಗೇರ,ಸುಧಾಕರ್ , ವಿಜಯಕುಮಾರ್,ವೆಂಕಟ ನರಸಿಂಹಲು ಸೇರಿದಂತೆ ಇನ್ನಿರರು ಉಪಸ್ಥಿತರಿದ್ದರು.