ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಆದೇಶ ಪ್ರತಿ ನೀಡಲು ಆಗ್ರಹ

ಅಫಜಲಪುರ:ಜು.6: ರಾಜ್ಯ ಶಾಸಕಾಂಗ ಅಧಿವೇಶನ ನಡೆಯುತ್ತಿರುವ ಮಧ್ಯೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಬಳಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಬಿಟಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ಅಭ್ಯರ್ಥಿಗಳ ಬಳಗ ನೆನೆಗುದಿಗೆ ಬಿದ್ದಿರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಆರಂಭಿಸುವಂತೆ ಹಾಗೂ ನ್ಯಾಯಲಯದ ಆದೇಶಕ್ಕೋಳಪಟ್ಟ ಕಂಡಿಷನಲ್ ನೇಮಕಾತಿ ಆದೇಶ ನೀಡುವಂತೆ ಕೋರಿ ಮನವಿ ಸಲ್ಲಿಸಿ ಮಾತನಾಡಿದರು.

2021ರಲ್ಲಿ ಆರಂಭವಾಗಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯು ಕುಂಟುತ್ತಾ ಸಾಗಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಅಂತಿಮ ಪಟ್ಟಿ ಪ್ರಕಟಗೊಂಡಿತ್ತು. ಅದಾದ ನಂತರ ಯಾವುದೇ ಪ್ರಕ್ರಿಯೆಗಳು ಆರಂಭಗೊಂಡಿರುವುದಿಲ್ಲ. ಇದರಿಂದಾಗಿ ಪ್ರಮಾಣಿಕವಾಗಿ ಕಠಿಣ ಪರಿಕ್ಷೇ ಬರೆದು ಆಯ್ಕೆಯಾದ ಅಭ್ಯಥಿ9ಗಳು, ಇಂದು ಸಾಮಾಜಿಕವಾಗಿ, ಆಥಿ9ಕವಾಗಿ, ಮಾನಸಿಕವಾಗಿ ಜರ್ಝರಿತರಾಗಿದ್ದಾರೆ. ನಮ್ಮ ತೊಂದರೆಗೆ ಸಕಾ9ರ ಸೂಕ್ತವಾಗಿ ಸ್ಪಂದಿಸಿ ಶೀಘ್ರ ನೇಮಕಾತಗೆ ಆದೇಶ ಪ್ರತಿ ನೀಡಬೇಕು. ಅಭ್ಯರ್ಥಿಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ವಿಶೇಷ ಗಮ ಹರಿಸುವುದಾಗಿ ತಿಳಿಸಿದ್ದಾರೆ.


ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆಯ್ಕೆಯಾದ ಅಭ್ಯರ್ಥಿಗಳ ಭವಿಷ್ಯಕ್ಕೆ ಸೂಕ್ತ ಭದ್ರತೆ ಒದಗಿಸಿ ಕೂಡಲೇ ಆದೇಶ ಹೊರಡಿಸಬೇಕು.

*ಬಾಪುಗೌಡ ಬಿರಾದಾರ ಅಫಜಲಪುರ,
ಆಯ್ಕೆಯಾದ ಅಭ್ಯರ್ಥಿ.