ಸಹಶಿಕ್ಷಕರ ಸಂಘಕ್ಕೆ ಆಯ್ಕೆ; ಸನ್ಮಾನ

ಹರಪನಹಳ್ಳಿ.ಜು.೧೧ : ತಾಲ್ಲೂಕು ಪ್ರೌಢಶಾಲೆ ಸಹಶಿಕ್ಷಕರ ಸಂಘದ ಚುನಾವಣೆಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎನ್.ಜಿ. ಮನೋಹರ್ ರವರಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು.ಹರಪನಹಳ್ಳಿ ತಾಲ್ಲೂಕಿನ ಪ್ರಾಢಶಾಲೆ ಸಹಶಿಕ್ಷಕರ ಸಂಘಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎನ್.ಜಿ. ಮನೋಹರ್ ರವರನ್ನು ತೌಡೂರು ಪ್ರೌಢಶಾಲಾ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಬಿ. ರುದ್ರೇಶ್,ಸಹ ಶಿಕ್ಷಕರಾದ ಸದಾನಂದ್ ನಾಯ್ಕ್, ಲೋಕೇಶ್,ಮಲ್ಲಪ್ಪ ದಳವಾಯಿ, ದೇವರಾಜ್, ಬಾಬು ರಾಜೇಂದ್ರ, ಬಸವರಾಜ್, ಜಗದೀಶ್ ಹಾಗೂ ರೇಷ್ಮಾ ಹಾಜರಿದ್ದರು