ಸಹಪಠ್ಯ ಸ್ಪರ್ಧೆ: ಬೆನಕನಹಳ್ಳಿ ಪ್ರಥಮ

ಹುಬ್ಬಳ್ಳಿ, ನ 20: ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಸ್ಥಳದಲ್ಲಿ ಪಾಠೋಪಕರಣಗಳ ಸ್ಪರ್ಧೆಯಲ್ಲಿ ನೇಕಾರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯಾದ ಲತಾದೇವಿ ಬಿ. ಬೆನಕನಹಳ್ಳಿ ಪ್ರಥಮ ಸ್ಥಾನ ಪಡೆದರು.
ಚಿತ್ರ ದ್ವಿತೀಯ ಸ್ಥಾನ ಪಡೆದರೆ ಸುನಿತಾ ಮತ್ತು ಫರೀದಾ ಶಿಕ್ಷಕಿಯರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅದೇ ರೀತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೇಕಾರನಗರದ ಶಿಕ್ಷಕರಾದ ಮಹೇಶ ಹೊಸಮನಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಮಚಂದ್ರ ಪತ್ತಾರ್ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡರು.