ಸಹಪಠ್ಯ ಚಟುವಟಿಕೆಗಳಿಂದ ಆತ್ಮವಿಶ್ವಾಸ, ಕ್ರಿಯಾಶೀಲತೆ ವೃದ್ಧಿ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಸೆ.೧೭: ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಕ್ರಿಯಾಶೀಲತೆ ವೃದ್ಧಿಯಾಗುತ್ತದೆ ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಸಹ ನಿರ್ದೇಶಕಿ ಟಿ.ಜಿ.ಲೀಲಾವತಿ ಹೇಳಿದರು. ನಗರದ ಡಯಟ್‌ನಲ್ಲಿ  ಡಿ.ಎಸ್.ಇ.ಆರ್.ಟಿ ವತಿಯಿಂದ ರಾಷ್ಟಿçÃಯ ಜನಸಂಖ್ಯಾ ಶಿಕ್ಷಣ ಯೋಜನೆ ಅಡಿಯಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಪರ್ದೆಯಲ್ಲಿ ಭಾಗವಹಿಸುವಿಕೆ ಮುಖ್ಯ, ಭಾಗವಹಿಸುವಿಕೆ ಕೊಡುವ ಸಂಭ್ರಮವನ್ನು ಸೋಲು ಗೆಲುವು ನೀಡುವುದಿಲ್ಲ. ನಮ್ಮ ಜೀವನದಲ್ಲಿ ಸೋಲು ಹೆಚ್ಚು ಗಟ್ಟಿಯಾಗಲು ಮತ್ತು ಗೆಲುವು ಹೆಚ್ಚಿನ ಆತ್ಮವಿಶ್ವಾಸ ನೀಡಿ ಮುಂದೆ ಹೋಗಲು ಅವಕಾಶವನ್ನು ಒದಗಿಸಿಕೊಡುತ್ತವೆ ಎಂದರು. ಪ್ರಾಂಶುಪಾಲ ಎಂ.ನಾಸಿರುದ್ದೀನ್ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಪಠ್ಯ ಚಟುವಟಿಕೆಗಳು ಬಹಳ ಮುಖ್ಯ. ಎನ್.ಪಿ.ಇ.ಪಿ ಅಡಿಯಲ್ಲಿ ನಡೆಯವ ಸ್ಪರ್ಧೆಗಳು ಥೀಮ್ ಆಧಾರಿತವಾಗಿದ್ದು ಮಕ್ಕಳಲ್ಲಿ ಜೀವನ ಕೌಶಲಗಳನ್ನು ಬೆಳೆಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ ಎಂದರು.  ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಉಪ ಪ್ರಾಂಶುಪಾಲ ಸಿ.ಎಸ್.ವೆಂಕಟೇಶಪ್ಪ, ಎನ್.ಪಿ.ಇ.ಪಿ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು, ಉಪನ್ಯಾಸಕರಾದ ಆರ್.ನಾಗರಾಜು, ಬಿ.ಎಸ್. ನಿತ್ಯಾನಂದ, ಎನ್.ರಾಘವೇಂದ್ರ, ಕೆ.ಜಿ.ಪ್ರಶಾಂತ್, ಸಿದ್ದೇಶಿ, ಎನ್.ಮಂಜುನಾಥ್, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು ತೀರ್ಪುಗಾರರಾದ ಉಮೇಶ್, ನಾಗರಾಜು, ಕೃಷ್ಣ, ಲೋಕೇಶ್, ಸುಕನ್ಯಾ, ಜ್ಯೋತಿ ಹಾಗೂ ಮಾರ್ಗದರ್ಶಿ ಶಿಕ್ಷಕರು ಮತ್ತು ಸ್ಪರ್ಧಾಳುಗಳು ಹಾಜರಿದ್ದರು.