ಸಹನಾ ರವಿ ಇಂಟರ್ನ್ಯಾಷನಲ್ ಸ್ಕೂಲ್ ಗೆ ಉತ್ತಮ ಫಲಿತಾಂಶ

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.16; 2023 – 24 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದ್ದಿದ್ದು, ನಗರದ  ಎಸ್. ನಿಜಲಿಂಗಪ್ಪ ಲೇಔಟ್ ನಲ್ಲಿರುವ ಶ್ರೀಮತಿ ಸಹನಾ ರವಿ ಇಂಟರ್ನ್ಯಾಷನಲ್ ಸ್ಕೂಲ್ ಗೆ ಅತ್ಯುತ್ತಮ  ಫಲಿತಾಂಶ ದೊರೆತಿದೆ ಎಂದು ಶಾಲೆಯ ಕಾರ್ಯದರ್ಶಿ ಸಹನಾ ರವಿ ತಿಳಿಸಿದ್ದಾರೆ.ಪರೀಕ್ಷೆ ಬರೆದ 27 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು,10 ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯ, 13 ಪ್ರಥಮ ದರ್ಜೆ ಹಾಗೂ 04 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿರುತ್ತಾರೆ.ವಿದ್ಯಾರ್ಥಿಗಳಾದ ಅಮೃತ ಕೆ ಎಂ (602/625) ಶೇ. 96.32%  ಪದ್ಮಶ್ರೀ ಕೆ ಎಸ್ (593/625) ಶೇ. 94.88 ಚಂದನ ಎಚ್ ಎಂ (585/625) ಅಂಕಗಳನ್ನು ಪಡೆದಿದ್ದಾರೆ. ಶಾಲೆಗೆ ಉತ್ತಮ ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎ. ರವಿ ಹಾಗೂ  ಪ್ರಾಂಶುಪಾಲೆ ಸಿಂಡ್ರೆಲಾ  ಅಭಿನಂದನೆ ಸಲ್ಲಿಸಿದ್ದಾರೆ.