ಸಹ‌ಜೀವನ ಪ್ರೇಮಿಗಳ ಗಮನಕ್ಕೆ

ಯುವಕ, ಯುವತಿಯರು ಮದುವೆ ಮಾಡಿಕೊಳ್ಳದೆ ಸಹ ಜೀವನ ನಡೆಸುವುದರ ಸುತ್ತ ಹೆಣೆಯಲಾದ ಕಥೆಯ ಹೂರಣ ಹೊಂದಿರುವ‌ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅದುವೇ ” ಪ್ರೇಮಿಗಳ ಗಮನಕ್ಕೆ”.

ನಗರ ಪ್ರದೇಶದ ಯುವಜನತೆಯಲ್ಲಿ ಸಹ ಜೀವನ ಹೆಚ್ಚಾಗುತ್ತಿದೆ.‌ ಬೆಂಗಳೂರಿನಂಥ ದೊಡ್ಡ  ನಗರಗಳಲ್ಲಿ ವಾಸಿಸುವ ಅದರಲ್ಲೂ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ.

ಕೊರೋನಾ ಸಂದರ್ಭದಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿ ಹೊರಗಡೆ ಎಲ್ಲೂ ಹೋಗದ ಸಂದರ್ಭದಲ್ಲಿ ಬೆಂಗಳೂರಿನ  ಎಲ್ಲಾ ಐಟಿ, ಬಿಟಿ ಕಂಪನಿಗಳು  ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವ ಅವಕಾಶ.. ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಯಕ, ನಾಯಕಿ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸತೊಡಗುತ್ತಾರೆ. ಆಗ ಅವರಿಗೆ  ಎದುರಾಗುವ ಸಂದರ್ಭಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವ  ಕುರಿತು  ಚಿತ್ರದಲ್ಲಿ ಹೇಳಲಾಗಿದೆ.

ಚಿತ್ರದಲ್ಲಿ 2 ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಬೆಂಗಳೂರಿನ ಉತ್ತರಹಳ್ಳಿಯ ಶೂಟಿಂಗ್ ಮನೆಯಲ್ಲಿ ನಡೆಸಲಾಗಿದೆ. ಉಳಿದ ಹಾಡಿನ ಚಿತ್ರೀಕರಣವನ್ನು ಮಂಗಳೂರಲ್ಲಿ ನಡೆಸುವ ಯೋಜನೆ ಚಿತ್ರತಂಡಕ್ಕಿದೆ.‌

ಕನ್ನಡ ಬಿಗ್ ಬಾಸ್ ಖ್ಯಾತಿಯ ಶಶಿ  ನಾಯಕ.  ಚಿರಶ್ರೀ ನಾಯಕಿ. ಸುಬ್ಬು ಮುಂತಾದವರು ತಾರಾಗಣದಲ್ಲಿದ್ದಾರೆ. ಜುಲೈ ಅಥವಾ ಆಗಸ್ಟ್ ವೇಳೆಗೆ ಚಿತ್ರವನ್ನು ತರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ. ವಿನ್ಸೆಂಟ್ ಇನ್ಬರಾಜ್  ಆಕ್ಷನ್ ಕಟ್ ಹೇಳಿದ್ದಾರೆ. ಅರುಳ್ ಸೆಲ್ವನ್ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್  ಸಂಗೀತ  ಚಿತ್ರಕ್ಕಿದೆ. ಸುಬ್ಬು  ಚಿತ್ರ ನಿರ್ಮಾಣ ಮಾಡಿದ್ದಾರೆ,