ಸಹಕಾರ ಸಂಘ ಬೆಳೆಯಲು ಸಹಕಾರ ಬೇಕು- ನಾಡಗೌಡ

ಸಿಂಧನೂರು.ಆ.೦೬- ಸಹಕಾರ ಸಂಘದ ಅಧ್ಯಕ್ಷರು ಹಾಗು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರ ಸಂಘ ರೈತರಿಗೆ ನೆರವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.
ತಾಲ್ಲೂಕಿನ ಹಂಚಿನಾಳಕ್ಯಾಂಪ (ಶಾಂತಿನಗರ) ದಲ್ಲಿ ಸಹಕಾರಿಯ ನೂತನ ಕಟ್ಟಡ (ಗೋದಾಮು)ಉದ್ಘಾಟಿಸಿ ಮಾತನಾಡಿದ ಅವರು ಸಂಘದ ಹಳೆಯ ಸದಸ್ಯರ ಜೊತೆಗೆ. ಹೊಸ ಸದಸ್ಯರಿಗೂ ಸಹ ಸಂಘ ದಿಂದ ಸಾಲ ನೀಡಬೇಕು ಸರ್ಕಾರದಿಂದ ಬಡ್ಡಿಯಿಲ್ಲದೆ ಸಾಲ ಸೌಲಭ್ಯ ಸಿಗಬೇಕು ಅಂದಾಗ ಮಾತ್ರ ರೈತರಿಗೆ ಅನುಕೂಲ ವಾಗುತ್ತದೆ ಎಂದರು.
ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಗೋಡಾನ ಸಾಲ ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಕಾರಣದಿಂದ ರೈತರಿಗೆ ಗೋಡಾನಾ ಸಾಲ ಕೊಡುವುದನ್ನು ಬ್ಯಾಂಕ್‌ಗಳು ನಿಲ್ಲಿಸಿದರಿಂದ ರೈತರಿಗೆ ತುಂಬ ತೊಂದರೆಯಾಗಿದೆ .ಸಹಕಾರ ಸಂಘದಲ್ಲಿ ರಾಜಕೀಯ ಬೆರಸಬಾರದು ಇದರಿಂದ ಸಂಘ ಹಾಳಾಗುತ್ತದೆ ಎಲ್ಲರು ಸೇರಿ ಹೊಂದಾಣಿಕೆ ಯಿಂದ ಕೆಲಸ ಮಾಡಿ ಸಂಘವನ್ನು ದೂಡ್ಡದಾಗಿ ಬೆಳೆಸಬೇಕು ಎಂದರು.
ಆರ್‌ಡಿಸಿಸಿ ಬ್ಯಾಂಕ್ ರೈತರಿಗೆ ಸಾಲ ನೀಡುವ ಮೂಲಕ ಅವರ ನೆರವಿಗೆ ಬಂದಿದ್ದು ಇಲ್ಲಿತನಕ ೭ ಕೊಟಿ ಸಾಲ ನೀಡಲಾಗಿದೆ. ಸಂಘ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಸಹಕಾರಿ ಸಂಘ ಬೆಳದರೆ ಎಲ್ಲರಿಗೂ ಅನುಕೂಲ ವಾಗುತ್ತದೆ ಎಂದು ಆರ್‌ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷರಾದ ವಿಶ್ವನಾಥ ರೆಡ್ಡಿ ಹೇಳಿದರು.
ಜಗತ್ತಿನಲ್ಲಿ ಅತಿಹೆಚ್ಚು ರಸಗೊಬ್ಬರ ಖರೀದಿ ಹಾಗು ಟ್ರ್ಯಾಕ್ಟರ್ ಮಾರಾಟದಲ್ಲಿ ಸಿಂಧನೂರ ತಾಲೂಕು ಪ್ರಥಮ ಸ್ಥಾನ ಪಡೆದು ಕೊಂಡಿದ್ದು ಸಂತೋಷ ಆದರೆ ಅಗತ್ಯ ಕ್ಕಿಂತ ಹೆಚ್ಚು ರಸಗೊಬ್ಬರವನ್ನು ರೈತರು ಬೆಳೆಗೆ ಬಳಸುವುದರಿಂದ ಪಂಜಾಬ್ ನಂತರ ಸಿಂಧನೂರ ತಾಲ್ಲೂಕಿನ ಭೂಮಿ ಬರಡುಯಾಗುತ್ತಿರುವುದು ನೋವಿನ ಸಂಗತಿಯಾಗಿದೆಂದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಪನಗೌಡ ಬಾದರ್ಲಿ ಪಿ.ಎಲ್ ಡಿ.ಬ್ಯಾಂಕ್ ಅಧ್ಯಕ್ಷರಾದ ಎಂ.ದೊಡ್ಡ ಬಸವರಾಜ ಆರ್‌ಡಿಸಿಪಿ ಬ್ಯಾಂಕ್ ನಿರ್ದೇಶಕರಾದ ಸೋಮನಗೌಡ ಬಾದರ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರಿರೆಢ್ಡಿ ನಬಾರ್ಡ್ ಅಧಿಕಾರಿ ಕಲಾವತಿ. ಜಿ.ಸತ್ಯನಾರಾಯಣ ಎನ್.ವಿ.ಸತ್ಯನಾರಾಯಣ ಸಹಕಾರಿ ಸಂಘದ ಅಧಿಕಾರಿ ಮಲ್ಲಯ್ಯ ವೆಂಕಟರಮಣ. ಶ್ರೀನಿದಿ ಇಂಜನಿಯರ. ಬೀಮನಗೌಡ. ವೆಂಕಟೇಶ. ರಾಮುಲು ಸೇರಿದಂತೆ ಇತರರು ಇದ್ದರು.