ಸಹಕಾರ ಸಂಘ ಅವ್ಯವಹಾರ ತನಿಖೆಗೆ ಒತ್ತಾಯ

ಕೋಲಾರ,ಏ.೬: ಕೆ.ಜಿ..ಎಫ್ ತಾಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರಗಳನ್ನು ಕೂಡಲೇ ತನಿಖೆ ನಡೆಸಿ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೆ.ಜಿ.ಎಫ್ ಮಾಜಿ ಶಾಸಕ ವೈ ಸಂಪಂಗಿ ಡಿ.ಸಿ.ಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೆಂಪಾಪುರ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ೧.೫೦ ಕೋಟಿ ಸಿ.ಸಿ.ಎಲ್ ಸಾಲ ಪಡೆದಿದ್ದು, ನಗದು ಡ್ರಾ ಮಾಡಿ ಹಣ ದುರುಪಯೋಗಪಡಿಸಿಕೊಂಡಿರುತ್ತಾರೆ. ನಂತರದಲ್ಲಿ ಬೇರೆ ಮೂಲಗಳಿಂದ ಹಣ ಪಾವತಿ ಮಾಡಿರುತ್ತಾರೆ, ಪಾರಂಡಹಳ್ಳಿ ಪ್ಯಾಕ್ಸ್ ಬೇತಮಂಗಲ ಪ್ಯಾಕ್ಸ್‌ಗೆ ಹಣವನ್ನು ವರ್ಗಾವಣೆ ಮಾಡಿ ಹಣ ದುರುಪಯೋಗ ಮಾಡಿರುತ್ತಾರೆ, ಪಾರಂಡಹಳ್ಲಿ ಪ್ಯಾಕ್ಸ್ ೯೬ ಎಸ್.ಹೆಚ್.ಜಿ ಗಳಿಗೆ ೩.೨೬ ಕೋಟಿ ಸಾಲವನ್ನು ಸಂಘಗಳಿಗೆ ನೀಡದೆ ಬೇನಾಮಿ ಸಾಲವನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿರುತ್ತಾರೆ ಎಂದರು. ಕೆ.ಜಿ.ಎಫ್ ಶಾಖೆಯ ಟಿ.ಆರ್ ಮಂಜುನಾಥ ಬಿ.ಇ.ಎಂ.ಎಲ್ ಸಂಘದೊಂದಿಗೆ ಕೈ ಜೋಡಿಸಿ ಇ.ಪಿ ಸಾಲಗಳನ್ನು ವಸೂಲಾತಿ ಮಾಡಿರುವುದಿಲ್ಲ ಎಂದು ಆರೋಪಿಸಿದರು.
ಬೋಡಗುರ್ಕಿ ವಿ.ಎಸ್.ಎಸ್.ಎನ್ ನಿಂದ ೯.೦೦ ಲಕ್ಷಗಳನ್ನು ಕೆ.ಜಿ.ಎಫ್ ವ್ಯವಸ್ಥಾಪಕ ಡ್ರಾ ಮಾಡಿಕೊಂಡು ಅವ್ಯವಹಾರ ಮಾಡಿರುತ್ತಾರೆ, ಕೆ.ಜಿ.ಎಫ್ ಶಾಖೆಯಲ್ಲಿ ಸುಮಾರು ಸಾಲಗಳು ಸುಸ್ತಿಯಾಗಿದ್ದರೂ ವಸೂಲಾತಿ ಮಾಡದೆ ನವೀಕರಣ ಮಾಡಿರುತ್ತಾರೆ. ಬ್ಯಾಂಕ್‌ನ ಕೆ.ಜಿ.ಎಫ್ ಶಾಖೆಯ ವ್ಯವಸ್ಥಾಪಕ ಟಿ.ಆರ್ ಮಂಜುನಾಥ ಬೇನಾಮಿ ಸಾಲಗಳನ್ನು ನೀಡಿ ಶಾಖೆಯನ್ನು ಮುಚ್ಚುವ ಹಂತಕ್ಕೆ ಬಾರಿ ಹಣವನ್ನು ಭ್ರಷ್ಟಾಚಾರ ಮಾಡಿರುತ್ತಾನೆ ಎಂದು ದೂರಿದರು.
ಕೂಡಲೇ ಆಗಿರುವ ಅವ್ಯವಹಾರವನ್ನು ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದ್ದಾರೆ.