ಕೋಲಾರ,ಸೆ.೨೨- ಜಿಲ್ಲಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ಕೋಲಾರ ಇದರ ೩೨ನೇ ಸರ್ವ ಸದಸ್ಯರ ಸಭೆಯು ನಗರದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಭಾಂಗಣದಲ್ಲಿ ನಡೆಯಿತು.
ಸಿವಿಲ್ ನ್ಯಾಯಾಧೀಶರು ಹಾಗೂ ಗೌರವಾನ್ವಿತ ಸದಸ್ಯರಾದ ಹೊಸಮನಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ಜಿಲ್ಲಾಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ವಿಟ್ಟಪ್ಪನಹಳ್ಳಿ ವಿ.ಮುನಿರಾಜು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರವಿಚಂದ್ರನ್, ಹಿರಿಯ ವಕೀಲ ಧನರಾಜ್, ಹಿರಿಯ ಸಹಕಾರಿ ಅಬ್ಬಣಿ ಶಂಕರ್, ಚದುಮನಹಳ್ಳಿ ಸುಬ್ರಮಣಿ, ಕೋಲಾರ ವಿದ್ಯುತ್ ಸರಬರಾಜು ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಕೋ.ನಾ.ಮಂಜುನಾಥ್ ಮುಂತಾದ ಸದಸ್ಯರು ಹಾಜರಿದ್ದು ಯಶಸ್ವಿಗೊಳಿಸಿದರು.