ಸಹಕಾರ ಸಂಘದ ಅಭಿವೃದ್ಧಿಗೆ ಸದಸ್ಯರ ಸಹಭಾಗಿತ್ವ ಮುಖ್ಯ.             

ಸೊರಬ.ಸೆ.೧೩:ಸಹಕಾರ ಸಂಘಗಳು ಆರ್ಥಿಕವಾಗಿ ಪ್ರಗತಿ ಹೊಂದಲು ಸದಸ್ಯರ ಸಹಭಾಗಿತ್ವ ಹಾಗೂ ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಸಹಕಾರಿ ಸಂಘಗಳು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೊಸಬಾಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ಕುಮಾರ್ ಕ್ಯಾಸನೂರು ಹೇಳಿದರು.            ತಾಲ್ಲೂಕಿನಲ್ಲಿ ಸೋಮವಾರ ಹೊಸಬಾಳೆ  ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಕರೆಯಲಾಗಿತ್ತು ಸಭೆಯನ್ನು ಉದ್ಘಾಟಿಸಿ  ಮಾತನಾಡಿದ ಅವರು  ಡಿಸಿಸಿ ಬ್ಯಾಂಕಿನಿಂದ ೬.೯೮ ಕೋಟಿ ರೂ ಸಾಲವನ್ನು ಪಡೆದು ಸದಸ್ಯರಿಗೆ ೯.೪೩ ಕೋಟಿ ರೂ ಸಾಲ ನೀಡಲಾಗಿದೆ ೩೬ ಕೋಟಿ ರೂ ವ್ಯವಹಾರ ನಡೆದಿದ್ದು ೭.೩೮ ಲಕ್ಷ ರೂ ನಿವ್ವಳ ಲಾಭ ಗಳಿಸಿ ತಾಲೂಕಿನಲ್ಲಿ ಮಾದರಿ ಸಹಕಾರ ಸಂಘವಾಗಿ ‘ಎ’ ತರಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘದಲ್ಲಿ ೨೧೩೯ ಸದಸ್ಯರಿದ್ದು ೩.೭೯ ಕೋಟಿ ಠೇವಣಿ ಒಳಗೊಂಡಿದೆ ಎಂದರು.          ಕಚೇರಿಯ ವ್ಯವಹಾರಗಳನ್ನು ಸಂಪೂರ್ಣವಾಗಿ ಗಣಕೀಕೃತಗೊಳಿಸಲಾಗುವುದು  ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ರಾಸಾಯನಿಕ ಗೊಬ್ಬರ,ಕೃಷಿ ಉಪಕರಣ,ಪಡಿತರವನ್ನು ವಿತರಣೆ ಮಾಡಲಾಗುತ್ತಿದೆ ಎಂದ ಅವರು ಈ ಸಂಘವು ಸ್ಥಾಪನೆಯಾಗಿ ೭೪ ವರ್ಷಗಳಾಗಿದ್ದು ೭೫ ನೇ ವರ್ಷದ  ಅಮೃತ ಮಹೋತ್ಸವವನ್ನು ಆಚರಿಸುವ ಉದ್ದೇಶವನ್ನು ಹೊಂದಲಾಗಿದೆ ಸದಸ್ಯರು ಹೆಚ್ಚು ಹೆಚ್ಚು ಷೇರು ಹಣವನ್ನು ಸಂಘದಲ್ಲಿ ತೊಡಗಿಸಿದಾಗ ಹೆಚ್ಚಿನ ಬಡ್ಡಿಯನ್ನು ನೀಡುತ್ತಿದ್ದು ಎಲ್ಲ ಸದಸ್ಯರ ಸಹಕಾರದಿಂದ ಸಂಘವು  ಉತ್ತಮ ಮುಂದುವರಿದುಕೊಂಡು ಹೋಗುತ್ತಿದೆ ಎಂದು ಹೇಳಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಪರುಶುರಾಮಪ್ಪ ವಾರ್ಷಿಕ ವರದಿ ಮಂಡಿಸಿದರು.ಕ್ಷೇತ್ರಾಧಿಕಾರಿ ಸಂತೋಷ್, ಸಂಘದ ಉಪಾಧ್ಯಕ್ಷ ತಿಮ್ಮಪ್ಪ ರಾಮಗೊಂಡನ ಕೊಪ್ಪ,ನಿರ್ದೇಶಕರುಗಳಾದ ಜಿ.ಎಂ. ತೋಟಪ್ಪ, ಬಾಲಚಂದ್ರ,ಕೆರೆ ಸ್ವಾಮಿಗೌಡ,ಲಿಂಗಪ್ಪ, ಮಹಾದೇವಪ್ಪ,ಕವಿತಾ,ಜಿ.ವೈ. ನಾಡಿಗೇರ್,ಮಂಜಪ್ಪ ಡಿ ಬಿ,ಸಾವಿತ್ರಮ್ಮ,ಅಜ್ಜಪ್ಪ ಕಾಸರಗುಪ್ಪೆ,ಗ್ರಾಪಂ ಅಧ್ಯಕ್ಷ ಸತ್ಯನಾರಾಯಣ ಕೆ ವಿ,ವಿನೋದಮ್ಮ,ಬಂದಿಗೆ ಬಸವರಾಜ್ ಶೇಟ್,ನಂದನ್,ರಂಗಪ್ಪ,ಮಂಜಪ್ಪ,ವೆಂಕಟೇಶ್, ಉದಯಕುಮಾರ್,ಮೊದಲಾದವರಿದ್ದರು.