ಸಹಕಾರ ಸಂಘಗಳು ಗುಣಮಟ್ಟದ ಸಾಲ ನೀಡಿಕೆಗೆ ಒತ್ತು ನೀಡಲಿ :ಶೈಲಜಾ ತಪಲಿ

ಕಲಬುರಗಿ:ಜೂ.16:ಸಹಕಾರ ಸಂಘಗಳು ಗುಣಮಟ್ಟದ ಸಾಲಗಳನ್ನು ನೀಡಬೇಕು ಹಾಗೂ ಸಾಲ ನೀಡುವಾಗ ಸಾಲಗಾರನ ಮರುಪಾವತಿ ಸಾಮರ್ಥ ಅರಿತುಕೊಂಡು ಸಾಲ ನೀಡ ಬೇಕು ಎಂದು ರಾಜ್ಯ ಸಂಯುಕ್ತ ಸಹಕಾರಿ ನಿರ್ದೇಶಕಿ ಶೈಲಜಾ ತಪಲಿ ತಿಳಿಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಪ್ರಾಂತೀಯ ಕಛೇರಿ ಕಲಬುರಗಿ ವತಿಯಿಂದ ಪ್ರಾಂತೀಯ ಕಛೇರಿಯಲ್ಲಿ ಆಯೋಜಿಸಿದ ಒಂದು ದಿನದ ವಿಷಯಾಧಾರಿತ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕರಾದ ಸುಭಾಷಚಂದ್ರ ಬರ್ಮಾ ಇವರು ಮಾತನಾಡಿ ಸಹಕಾರಿಗಳು ತಮ್ಮ ಕಾಯ್ದೆ ಮತ್ತು ಉಪವಿಧಿಗಳಲ್ಲಿ ತಿಳಿಸಿರುವಂತೆ ಕಾರ್ಯನಿರ್ವಹಿಸಿದಾಗ ಮಾತ್ರ ಸದೃಡವಾಗಿ ಅಭಿವೃದ್ಧಿ ಹೊಂದಲು ಸಾಧ್ಯವೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಸಂಯುಕ್ತ ಸಹಕಾರಿಯ ನಿಕಟಪೂರ್ವ ನಿರ್ದೇಶಕ ಸಂಜೀವ ಮಹಾಜನ,ಕಲಬುರಗಿ ಒಕ್ಕೂದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್, ಸಂಪನ್ಮೂಲ ವ್ಯಕ್ತಿ ನಾಗರಾಜ ಮಡಿವಾಳ ಪ್ರಾಸ್ತಾವಿಕ ಮತ್ತು ಸ್ವಾಗತವನ್ನು ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರಾಕಲೆ ನಡೆಸಿದರು ವೀರಶಟ್ಟಿ ನಿರೂಪಿಸಿದರು, ಆನಂದರಾಯ ವಂದಿಸಿದರು, ಕಲಬುರಗಿಯ ಜಿಲ್ಲೆಯ ಸೌಹಾರ್ದ ಸಹಕಾರಿಯ ಅಧ್ಯಕ್ಷರು ಮುಖ್ಯ ಕಾರ್ಯನಿರ್ವಾಹಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.