ಸಹಕಾರ ಸಂಘಗಳಿಂದ ರೈತರ ಆರ್ಥಿಕ ಸ್ವಾವಲಂಬಿತನ ಸಾಧ್ಯ

ಸಂಜೆವಾಣಿ ವಾರ್ತೆ

ಜಗಳೂರು.ನ.೨೦; ಬರದನಾಡಿನಲ್ಲಿ ಸಹಕಾರ ಸಂಘಗಳು ರೈತರ ಆರ್ಥಿಕ ಸ್ವಾವಲಂಬಿತನ ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು .ಪಟ್ಟಣದ ಗುರುಭವನದಲ್ಲಿ ವಿವಿಧ ಸಹಕಾರಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯ ಉದ್ಘಾಟಿಸಿ  ಮಾತನಾಡಿದರು.ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ ಸಂಘಟನೆ ಹೋರಾಟ ದ ಆಶಯದಂತೆ ಸಹಕಾರ ಸಂಘ ಸಿದ್ದನ ಗೌಡ ಎಂಬ ಏಕ ವ್ಯಕ್ತಿಯಿಂದ ಸ್ಥಾಪಿಸಲ್ಪಟ್ಟು.ನಿರಂತರ ಸಂಘಟನೆ ಇಂದ ದೇಶವ್ಯಾಪಿ 8ಲಕ್ಷಕ್ಕೂ ಅಧಿಕ ಸಾಮೂಹಿಕ ಸಂಘಗಳು ವಿಸ್ತರಿಸಿರುವುದು ಶ್ಲಾಘನೀಯ ಎಂದ ರು. ಸಹಕಾರ ಸಂಘದಲ್ಲಿ ರಾಜಕಾರಣ ಸಲ್ಲದು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಸಹಕಾರ ಸಂಘಗಳು ರಾಜಕಾರಣದಲ್ಲಿತೊಡಗಬೇಕು. ನಂತರ ಸೌಹಾರ್ದಯುತ ವಾಗಿ ಒಗ್ಗಟ್ಟಿನಿಂದ ತಾಲೂಕಿನ ಬಡ ರೈತರ ಆರ್ಥಿಕ ಸಂಕಷ್ಟಕ್ಕೆ ಪಕ್ಷಾತೀತವಾಗಿ ನೆರವಾಗ ಬೇಕು.ನಾನು ಒಬ್ಬ ಸೇವಕನಾಗಿ ಕೈ ಜೋಡಿಸುವೆ.ಸಹ ಕಾರ ಇಲಾಖೆ ಸಚಿವರನ್ನು ಶೀಘ್ರದಲ್ಲಿ ಕ್ಷೇತ್ರಕ್ಕೆ ಆಹ್ವಾನಿಸುವೆ ತಾವುಗಳು ಸಹಕಾರ ಸಂಘಗಳ ಅಭಿವೃದ್ದಿ ಚಿಂತನೆಯ ಅಹವಾಲುಗಳನ್ನು ತಯಾರಿಸಿಕೊಳ್ಳಿ ಎಂದು ಸಲಹೆ ನೀಡಿದರು.ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಆಡಳಿತ ಸರಕಾರದ ರಚನೆ ಮತ್ತು ಪತನ ಕ್ಕೆ ನಿರ್ಣಯಕ್ಕೆ ಕಾರಣವಾದ ಮಹಾ ರಾಷ್ಟ್ರ ದಲ್ಲಿನ ಸಹಕಾರ ಸಂಘಗಳ ಅಭಿವೃದ್ದಿ ಮಾದರಿಯಲ್ಲಿ ರಾಜ್ಯದಲ್ಲಿ ಸದೃಢವಾಗಬೇಕಿದೆ.ಬಡ ರೈತ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕರಿಸಲಿ.ಸರಕಾರದ ನೇರವಿನೊಂದಿಗೆ ಸಿಗುವ ಆರ್ಥಿಕ ಸಹಾಯಧನ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗದೆ ನೇರವಾಗಿ ರೈತರಿಗೆ ಸೌಲಭ್ಯಗಳು ಸಿಗಬೇಕಿದೆ.ನನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಬಾರಿ ಈ ಕುರಿತು ಹೇಳಿದ್ದರೂ ಮರುಕಳಿಸುತ್ತಿವೆ ಎಂದು ಹೇಳಿದರು.ಸಹಕಾರ ಸಂಘದ ವ್ಯವಸ್ಥಾಪಕ ನಾಗಭೂಷಣ್ ಮಾತನಾಡಿ,ತಾಲೂಕಿನಲ್ಲಿ 38 ಸೊಸೈಟಿಗಳಲ್ಲಿ ಮನೆಗಳಲ್ಲಿ ನಡೆಯುತ್ತಿವೆ. ನಿವೇಶನಕ್ಕೆ ಸ್ಥಳೀಯ ಶಾಸಕರು ಆರ್ಥಿಕ ಸಹಾಯಸ್ತಚಾಚಬೇಕು ಮನವಿಮಾಡಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕು ಅಧ್ಯಕ್ಷ ಜೆ.ಟಿ.ಉಮೇಶ್ ಬಾಬು,ನಿವೃತ್ತ ಲೀಡ್ ಬ್ಯಾಂಕ್ ಮ್ಯಾನೇಜರ್ ಎನ್.ಟಿ.ರ‍್ರಿಸ್ವಾಮಿ,ಸಹಕಾರ ರತ್ನ ಪುರಸ್ಮೃತ ವೇಣುಗೋಪಾಲರೆಡ್ಡಿ,ಡಾ,ಷಣ್ಮುಖಪ್ಪ,ಜಗದೀಶ್ ಬಣಕಾರ್,ಬಸಪ್ಪ,ಸೋಮಶೇಖರಪ್ಪ,ಸಿರಿಗೆರೆ ರಾಜಣ್ಣ,ಮುರಿಗೆಂದ್ರಯ್ಯ ,ರಾಜು ನಾರಾಯಣ ತಿಪ್ಪೇಸ್ವಾಮಿ ಗೌಡ., ಅನ್ನಪೂರ್ಣ ,ಮಂಜುಳಾ,ಶಿವನಗೌಡ, ರಾಮು. ವ್ಯವಸ್ಥಾಪಕರಾದ ಮಂಂಜು ಕುಮಾರ್ ಇದ್ದರು.