ಸಹಕಾರ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡ್ಯೊಯ್ದ ಕೀರ್ತಿ ಶಾಸಕ ಕೆ. ಶ್ರೀನಿವಾಸಗೌಡರಿಗೆ ಸಲ್ಲಬೇಕು: ಅನಿಲ್ ಕುಮಾರ್

ಕೋಲಾರ,ನ,೨೧-ಕೋಲಾರ ಸಹಕಾರ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡ್ಯೊಯ್ದ ಕೀರ್ತಿ ಶಾಸಕ ಕೆ. ಶ್ರೀನಿವಾಸಗೌಡರಿಗೆ ಸಲ್ಲುವುದಕ್ಕೆ ಅಭಿನಂದಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು,
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್,ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ಕಾರಂಜಿಕಟ್ಟೆಯ ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೬೯ನೇ ಅಖಿಲಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಹಕಾರ ರತ್ನ ಪುರಸ್ಕೃರಿಸಿ ಸನ್ಮಾನಿಸಿದ ಅವರು ಮಾತನಾಡಿದರು.
ಸಹಕಾರ ವ್ಯವಸ್ಥೆಯನ್ನು ಮಳ್ಳೂರು ಪಾಪಾಣ್ಣ, ಸೀತಪ್ಪ, ನಾರಾಯಣಗೌಡರು ಅನೇಕರ ಶ್ರಮ ಅಡಗಿದೆ.ಎಲ್ಲಕ್ಕಿಂತ ಹೆಚ್ಚಾಗಿ ಸಹಕಾರ ವ್ಯವಸ್ಥೆಯು ದುರ್ಬಗೊಂಡ ಸಂದರ್ಭದಲ್ಲಿ ಅದನ್ನು ಸಧೃಢಗೊಳಿಸಿ ರಾಜ್ಯದಲ್ಲಿ ನಂಬರ್ ಓನ್ ಸ್ಥಾನಕ್ಕೆ ತೆಗೆದು ಕೊಂಡು ಹೋದ ಬ್ಯಾಲಹಳ್ಳಿ ಗೋವಿಂದಗೌಡರು ಇತಿಹಾಸ ದಾಖಲು ಮಾಡಿದ್ದು ಶ್ಲಾಘನೀಯ ಸಂಗತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು,
ಸಹಕಾರ ವ್ಯವಸ್ಥೆಯಲ್ಲಿ ಪಾಲುಗಾರಿಕೆಗೆ ಅವಕಾಶ ಸಿಗಲಿಲ್ಲ. ಸರ್ಕಾರವು ಸಹಕಾರವನ್ನು ಬಲಪಡೆಸುವಂತ ಉದ್ದೇಶ ಹೊಂದಿದ್ದರೆ, ಪಾಲುಗಾರಿಕೆ ಸದಸ್ಯತ್ವಕ್ಕೆ ಅವಕಾಶ ಸಿಗುವಂತಾಗುತ್ತದೆ.ಎಂ.ಪಿ.ಸಿ.ಎಸ್.ಗಳಲ್ಲಿ ಪಾಲುಗಾರಿಕೆ ಸದಸ್ಯತ್ವ ನೀಡಿ ಸಮಾನತೆ ಹಂಚಿಕೆಯಾಗ ಬೇಕು, ಕೋಲಾರ ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗಿದ್ದರೂ ಸಹ ರೈತರು ಅತ್ಮಹತ್ಯೆಗೆ ಶರಣಾಗಲಿಲ್ಲ. ಎಂ.ವಿ.ಕೃಷ್ಣಪ್ಪ ಮತ್ತು ಕುರಿಯನ್ ಅವರು ಹೈನುಗಾರಿಕೆ ಉದ್ಯಮಕ್ಕೆ ಮಾರ್ಗದರ್ಶನ ನೀಡಿದರು, ಬ್ಯಾಲಹಳ್ಳಿ ಗೋವಿಂದಗೌಡರು ಡಿಸಿಸಿ ಬ್ಯಾಂಕ್‌ನಿಂದ ಅರ್ಥಿಕ ಸೌಲಭ್ಯಗಳನ್ನು ಕಲ್ಪಿಸಿ ಸ್ವಾವಲಂಭಿಗಳಾಗಿ ಮಾಡಿದ ಹಿನ್ನಲೆಯಲ್ಲಿ ಡಿ.ಸಿ.ಸಿ.ಬ್ಯಾಂಕ್ ಮತ್ತು ಹೈನುಗಾರಿಕೆಯು ರೈತರ ಮತ್ತು ಮಹಿಳಾ ಸಂಘಗಳ ಜೀವನಾಡಿಯಾಗ ಕಾರ್ಯನಿರ್ವಾಹಿಸಿದೆ ಎಂದು ಹೇಳಿದರು.
ಪ್ರಸ್ತುತ ಟಮ್ಯೂಟೋ,. ಅಲೂಗಡ್ಡೆ, ಮಾವು ಮುಂತಾದ ಬೆಳೆಗಳನ್ನಾಧರಿಸಿ ರೈತರು ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಅರ್ಥಿಕ ಸೌಲಭ್ಯವನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕು, ಈ ವ್ಯವಸ್ಥೆಯನ್ನು ಕೋಲಾರದ ಮೂಲಕವೇ ಪ್ರಥಮವಾಗಿ ಜಾರಿಯಾಗ ಬೇಕು, ಇದರಿಂದ ರೈತರು ಇತರೆ ಬ್ಯಾಂಕ್‌ಗಳು ಮೀಟರ್ ಬಡ್ಡಿ ಮುಂತಾದ ಕಡೆ ಹೋಗ ಬೇಕಾದ ಪರಿಸ್ಥಿತಿಗಳಿಗೆ ಕಡಿವಾಣ ಬೀಳಲಿದೆ ಎಂದರು.
ಕಳೆದ ೨೦೦೪ರಿಂದ ೨೦೧೪ರವರೆಗೆ ಡಿಸಿಸಿ ಬ್ಯಾಂಕ್ ವಹಿವಾಟು ಏರುಪೇರಾಗಿದ್ದು ಬೆಂಗಳೂರಿನ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸ ಬೇಕೆಂಬ ಚಿಂತನೆಯಲ್ಲಿದ್ದಾಗ ಅದಕ್ಕೆ ಬ್ಯಾಲಹಳ್ಳಿ ಗೋವಿಂದಗೌಡ ಹೊಸರೂಪ ನೀಡಿ ಕಂಪ್ಯೋಟರಿಕರಣ ಮತ್ತು ಫ್ಯಾಕ್ಸ್‌ಗಲು ಜಾರಿಯಾಗಿ ಪಾರದರ್ಶಕ ಆಡಳಿತ ಜಾರಿಯಾಗಿ ಭ್ರಷ್ಟಚಾರಗಳಿಗೆ, ಬುಕ್ ಅಡ್ಜಸ್ಟ್‌ಮೆಂಟ್‌ಗಳಿಗೆ ಕಡಿವಾಣ ತಂದರು,ಡಿಜಿಟಲ್ ವ್ಯವಸ್ಥೆಗೆ ಮುನ್ನ ಕಂಪ್ಯೋಟರೀಕರಣ ಮಾಡಲಾಗಿತ್ತು, ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಡಿಜಿಟಲೀಕರಣ ಮಾಡಲು ಮುಂದಿನ ಹೆಚ್ಚೆ ಇಟ್ಟಿದೆ ಎಂದರು,
ಡಿಸಿಸಿ ಬ್ಯಾಂಕ್ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಪ್ರಮಾಣಿಕತೆ ಮತ್ತು ಬದ್ದತೆಯಿಂದ ಕೆಲಸ ನಿರ್ವಾಹಿಸುತ್ತಿದೆ.ಈ ಹಿಂದೆ ಬೆಂಗಳೂರು ಹಾಲು ಒಕ್ಕೂಟವನ್ನು ಬೇರ್ಪಡಿಸಲು ಪ್ರಯತ್ನಿಸಿದಾಗ ಅವಕಾಶ ನೀಡಲಿಲ್ಲ. ಅದರೆ ಕೋಚಿಮುಲ್ ಹಾಲು ಒಕ್ಕೂಟವನ್ನು ಬೇರ್ಪಡಿಸುವಲ್ಲಿ ಪಟ್ಟಭದ್ರ ಹಿತಾಸಕ್ತರು ಮುಂದಾಗಿದ್ದಾರೆ. ಅದರ ವಿರುದ್ದ ಮಾತನಾಡುವಂತ ಜನಪ್ರತಿನಿಧಿಗಳೇ ಇಲ್ಲವಾಗಿರುವುದು ಶೋಚನೀಯ ಸಂಗತಿಯಾಗಿದೆ. ಇದೇ ರೀತಿ ಡಿ.ಸಿ.ಸಿ. ಬ್ಯಾಂಕ್ ವಿಭಜಿಸಲು ಕೆಲವು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿರುವುದು ಖೇದನಿಯ ಸಂಗತಿಯಾಗಿದೆ ಎಂದು ವಿಷಾಧಿಸಿದರು,
ವಿಭಜನೆಯಿಂದ ಯಾವೂದೇ ಲಾಭವೂ ಇಲ್ಲ, ಪ್ರಯೋಜನವು ಇಲ್ಲ. ಡಿಸಿಸಿ ಬ್ಯಾಂಕ್ ೧೨ ಶಾಖೆಯನ್ನು ಮುಂದಿನ ದಿನಗಳಲ್ಲಿ ೨೪ ಶಾಖೆಗಳಾಗಿ ವಿಸ್ತರಿಸುವ ಗುರಿ ಹೊಂದಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮೂಬೈಲ್ ಸೌಲಭ್ಯವನ್ನು ಕಲ್ಪಿಸಿದೆ. ದಕ್ಕಿಣಕನ್ನಡ ಜಿಲ್ಲೆಯಲ್ಲಿ ಎಂ.ಪಿ.ಎಸ್.ಸಿ.ಗಳು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವಷ್ಟು ಅರ್ಥಿಕವಾಗಿ ಸಧೃಢವಾಗಿದೆ ಎಂದ ಅವರು ಈ ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ೭೩ ಸಾವಿರ ಕೋಟಿ ರೂ ಸಾಲಮನ್ನ ಮಾಡಿದರೂ ಜಿಲ್ಲೆಯ ಡಿಸಿಸಿ ಬ್ಯಾಂಕ್ ಶೋಚನೀಯ ಸ್ಥಿತಿಯಿಂದಾಗಿ ಯಾವೂದೇ ಅನುವುಂಟಾಗಲಿಲ್ಲ.ರಾಜ್ಯದಲ್ಲಿ ೩೬೦ ಕೋಟಿ ರೂ ರೈತರ ಸಾಲ ಮನ್ನ ಅಗಿದೆ. ಇದೇ ರೀತಿ ಡಾ. ವೈದ್ಯನಾಥನ್ ವರದಿಯಿಂದಲೂ ಸಹ ಪ್ರಯೋಜನವಾಗಲಿಲ್ಲ. ಇದಕ್ಕೆ ಮೂಲ ಕಾರಣ ಸದಸ್ಯತ್ವ ನೀಡದಿರುವುದರಿಂದ ಉಪಯೋಗವಾಗಲಿಲ್ಲ ಎಂದು ವಿವರಿಸಿದರು,