ಸಹಕಾರ ರತ್ನ ಪ್ರಶಸ್ತ್ತಿಗೆ ಅರ್ಜಿಸಲ್ಲಿಸುವ ಪದ್ದತಿ ಕೈಬಿಡಲು ಮನವಿ

ಚಿಂಚೋಳಿ,ಅ.17- ನ್ಯಾಯ ಸಮ್ಮತವಾಗಿ ಪ್ರಶಸ್ತಿ ಸಿಗುವಂತಾಗಬೇಕು, ಯಾವುದೇ ಒಬ್ಬ ವ್ಯಕ್ತಿಯ ಸೇವೆಗೆ ಗೌರವ ಸಲ್ಲಬೇಕಾದರೆ ಸರ್ಕಾರ ಇಲಾಖೆ ಅಧಿಕಾರಿಗಳ ಮುಖಾಂತರ ತಾಲ್ಲೂಕ ಮಟ್ಟದಿಂದ ಸಹಕಾರ ಧುರೀಣರ ಬಗ್ಗೆ ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿ ಅವರ ಹೆಸರು ಶಿಫಾರಸ್ಸು ಮಾಡಿದ ನಂತರವೇ ಸರ್ಕಾರ ಅಂತಹವರಿಗೆ ಮಾತ್ರ ಆದ್ಯತೆ ನೀಡುವ ಮೂಲಕ ಗೌರವಿಸುವುದು ಗೌರವಯುತವಾದ ಪದ್ಧತಿಯಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ ಯಾಕಾಪೂರ, ಅವರು, ಪ್ರತಿ ವರ್ಷ ಸಹಕಾರ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಮಾಡಲು ಸಹಕಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಆಯಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗಳ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯ್ಕೆ
ಸಮಿತಿ ರಚಿಸಿ ಸದರಿ ಸಮಿತಿಯವರ ಶಿಫಾರಸ್ಸಿನೊಂದಿಗೆ ಜಿಲ್ಲೆಗೆ 2-3 ಜನ ಸಹಕಾರಿಗಳ ಹೆಸರು ಸರ್ಕಾರಕ್ಕೆ
ಸಲ್ಲಿಸುತ್ತಾರೆ ಆದರೆ ಕಳೆದ ಸುಮಾರು 5 ವರ್ಷಗಳ ಕಾಲದಿಂದ ನಾನು ಗಮನಿಸಿದ್ದೇನೆ ಯಾರದೆ ಹೆಸರು ಈ ಜಿಲ್ಲಾ ಸಮಿತಿ ಶಿಫಾರಸ್ಸು ಮಾಡಿದರೂ ಸರ್ಕಾರದ ಮಟ್ಟದಲ್ಲಿ ಅಂತಿಮಗೊಳಿಸುವಾಗ ಸರ್ಕಾರ ಯಾವ ಪಕ್ಷದವರದಾಗಿರುತ್ತದೆಯೋ ಅದೇ ಪಕ್ಷದವರಲ್ಲಿ ಒಬ್ಬರ ಹೆಸರು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ
ಇಂತಹ ನಿಯಮಗಳಲ್ಲಿ ಬದಲಾವಣೆ ಕೈಗೊಳ್ಳಬೇಕು ಹೊಸದಾಗಿ ನಿಯಮ ಜಾರಿಗೆ ತರಬೇಕು, ಸಾಧಕರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡುವುದು ಸರ್ಕಾರದ ನ್ಯಾಯ ಸಮ್ಮತ ಕ್ರಮವನ್ನು ಅಳವಡಿಸಿಕೊಳ್ಳಬೇಕು.
ತಾವು ಸ್ವತಹ ಸುಮಾರು 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆಯಲ್ಲಿ ಇದ್ದು, ಕಲಬುರಗಿ ಜಿಲ್ಲಾ ಸಮಿತಿಯವರು 2 ಸಲ ನನ್ನ ಹೆಸರು ಸಹಕಾರ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದರೂ ಕೂಡ ನನಗೆ ಅದು ದೊರಕಿರುವುದಿಲ್ಲಾ ಇದರಿಂದಾಗಿ ನಾನು ಅರ್ಜಿ ಸಲ್ಲಿಸುವುದನ್ನು ಬಿಟ್ಟು ಬಿಟ್ಟಿರುತ್ತೇನೆ ಆದ್ದರಿಂದ ಸರ್ಕಾರ ಅರ್ಜಿ ಆಹ್ವಾನಿಸಿ ಪ್ರಶಸ್ತಿಗಳನ್ನು ನೀಡುವ ಪದ್ಧತಿ ಬದಲಿಸಿ ಸರ್ಕಾರದ ಆಯಾ ಇಲಾಖಾ ಅಧಿಕಾರಿಗಳ ಮುಖಾಂತರ ಗೌಪ್ಯ ವರದಿ ಸಂಗ್ರಹಿಸಿ ಆಯ್ಕೆ ಮಾಡುವ ಪದ್ಧತಿ ಸೂಕ್ತವಾದದ್ದು ಅದನ್ನು ಅಳವಡಿಸಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮತ್ತು ಸಹಕಾರ ಸಚಿವರಾದ ರಾಜಣ್ಣ ಅವರಿಗೆ ಈಗಾಗಲೇ ನಾನು ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ರಮೇಶ ಯಾಕಾಪೂರ, ಅವರು ಹೇಳಿದರು.