ಸಹಕಾರ ರತ್ನ ಪ್ರಶಸ್ತಿ ಸ್ವೀಕರಿಸಿದ ನೇಕಾರ ವಿರೂಪಾಕ್ಷಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.21: ರಾಜ್ಯದ ಸಹಕಾರ ಇಲಾಖೆ ಕೊಡಮಾಡುವ ರಾಜ್ಯ ಮಟ್ಟದ ಈ ವರ್ಷದ “ಸಹಕಾರ ರತ್ನ” ಪ್ರಶಸ್ತಿಯನ್ನು ನಗರದ ಸಹಕಾರ ಉದ್ಯಮಿ ಡಾ.ನೇಕಾರ ವಿರೂಪಾಕ್ಷಪ್ಪ ಅವರು ಸ್ವೀಕರಿಸಿದ್ದಾರೆ.
ಮೊನ್ನೆ ವಿಜಯಪುರದಲ್ಲಿ ನಡೆದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಮೊದಲಾದ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಬಳ್ಳಾರಿಯ ಕೈಮಗ್ಗ ನೇಕಾರರ ಉತ್ಪತ್ತಿ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ, ಬಳ್ಳಾರಿ ಅರ್ಬನ್ ಕೋಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ, ನೇಕಾರಭವನ, ಜಿಲ್ಲಾ ಮಾರಾಟ ಮಾರ್ಕೆಟಿಂಗ್ ಸೊಸೈಟಿ, (ಡಿ.ಎಸ್.ಎಂ.ಎಸ್), ಆಲ್ ಇಂಡಿಯಾ ಫ್ಯಾಬ್ರಿಕ್ಸ್ ಮಾರ್ಕೆಟಿಂಗ್ ಕೋ ಆಪರೇಟಿವ್ ಸೊಸೈಟಿ ಹೊಸ ದೆಹಲಿಯ ನಿರ್ದೇಶಕರಾಗಿ, ರಾಜ್ಯದ ಕಾವೇರಿ ಹ್ಯಾಂಡ್ ಲೂಮ್ಸ್ ನ, ಬಳ್ಳಾರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಉಪಾಧ್ಯಕ್ಷರಾಗಿ ಸೇರಿದಂತೆ ಒಟ್ಟಾರೆ ಸಹಕಾರಿ ಕ್ಷೇತ್ರದಲ್ಲಿ ವಿರುಪಾಕ್ಷಪ್ಪ ಅವರು ಸಲ್ಲಿಸಿದ 33 ವರ್ಷಗಳ ಸೇವೆಯನ್ನು ಪರಿಗಣಿಸಿ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ.