ಸಹಕಾರ ರಂಗದಲ್ಲಿ ಪತ್ರಿಕಾ ರಂಗದ ಸೇವೆ ಪರಿಗಣಿಸಿ ಸನ್ಮಾನ

ಬೀದರ್:ನ.21: ಭಾನುವಾರ ಬೀದರ್ ನಗರದ ಪ್ರತಾಪನಗರ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯುನಿಯನ್, ಡಿ.ಸಿ.ಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಂಜೆವಾಣಿ ದಿನಪತ್ರಿಕೆಯ ಉಪ ಸಂಪಾದಕ ಶಿವಕುಮಾರ ಸ್ವಾಮಿ ಅವರಿಗೆ ಸಹಕಾರ ರಂಗದಲ್ಲಿ ಅವರ ಪತ್ರಿಕಾ ರಂಗದ ಸೇವೆ ಪರಿಗಣಿಸಿ ವಿಶೇಷ ಸನ್ಮಾನ ಮಾಡಲಾಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರು ಹಾಗೂ ಡಿ.ಸಿ.ಸಿ ಬ್ಯಾಂಕ್ ಅದ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ, ಕರ್ನಾಟಕ ಸರ್ಕಾರದಿಂದ ಪ್ರಸಕ್ತ ವರ್ಷ ಸಹಕಾರ ರತ್ನ ಪ್ರಶಸ್ತಿ ಪುರಸ್ಕ್ರತರು ಹಾಗೂ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅದ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲ, ಪತ್ರಕರ್ತ ಓಂಕಾರ ಮಠಪತಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಎಂ.ಡಿ ಸಲಿಮೋದ್ದೀನ್, ಬಸವರಾಜ ಹೆಬ್ಬಾಳೆ, ಬ್ಯಾಂಕ್ ಸಿ.ಇ.ಓ ಮಹಾಜನ ಮಲ್ಲಿಕಾರ್ಜುನ, ಸಹಕಾರ ಇಲಾಖೆಯ ಉಪ ನಿಭಂಧಕ ಮೋಹನ್ ರಾಠೋಡ, ಸಹಕಾರ ಯುನಿಯನ್ ಅಧ್ಯಕ್ಷ ಪರಮೇಶ್ವರ ಮುಗಟೆ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.