ಸಹಕಾರ ಮಹಾ ಮಂಡಳಿ ಜಿ.ಟಿ.ಡಿ ಬಣಕ್ಕೆ ಗೆಲುವು

ಬೆಂಗಳೂರು, ಮಾ. ೨೯- ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮುಂದಿನ ಐದು ವರ್ಷಗಳ ಅವಧಿಗೆ ಮಾರ್ಚ್ ೨೮, ೨೦೨೧ ರಂದು ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕ ಜಿ.ಟಿ. ದೇವೇಗೌಡರ ನೇತೃತ್ವದ ತಂಡದ ಎಲ್ಲಾ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ.
೨೯ ಜಿಲ್ಲಾ ಯೂನಿಯನ್ನುಗಳಿಂದ ೧೩ ಸ್ಥಾನಗಳಿಗೆ ೨೬ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಇತರೆ ವಲಯದಿಂದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಚುನಾಯಿತರ ಪ್ರತಿನಿಧಿಗಳ ವಿವರ:
ಮೈಸೂರು ವಿಭಾಗದಿಂದ ಮೂರು ಸ್ಥಾನಗಳು ಆಯ್ಕೆ ನಡೆದಿದ್ದು, ಜಿ.ಟಿ. ದೇವೇಗೌಡ, ಬಿ.ಸಿ. ಲೋಕಪ್ಪ ಗೌಡ, ಜಯಕರ ಶೆಟ್ಟಿ ಬಿ. ಇಂದ್ರಾಳಿಯವರು ಆಯ್ಕೆಯಾಗಿದ್ದಾರೆ.
ಬೆಂಗಳೂರು ವಿಭಾಗದಿಂದ ನಾಲ್ಕು ಸ್ಥಾನಗಳು ಆಯ್ಕೆ ನಡೆದಿದ್ದು, ಹೆಚ್.ಎನ್. ಅಶೋಕ್, ಎ.ಸಿ. ನಾಗರಾಜ್, ರಾಮಿರೆಡ್ಡಿ, ಬಿ.ಡಿ. ಭೂ ಕಾಂತ ಆಯ್ಕೆಯಾಗಿದ್ದಾರೆ.
ಬೆಳಗಾವಿ ವಿಭಾಗದಿಂದ ಮೂರು ಸ್ಥಾನಗಳು ಆಯ್ಕೆ ನಡೆದಿದ್ದು, ಜಗದೀಶ ಮಲ್ಲಿಕಾರ್ಜುನ ಕವಟಗಿ ಮಠ, ಈರಣ್ಣ ಪಟ್ಟಣ ಶೆಟ್ಟಿ, ಬಸವರಾಜ್ ನೀ. ಅರಬಗೊಂಡ ಆಯ್ಕೆಯಾಗಿದ್ದಾರೆ.
ಕಲಬುರ್ಗಿ ವಿಭಾಗದಿಂದ ಮೂರು ಸ್ಥಾನಗಳು ಆಯ್ಕೆ ನಡೆದಿದ್ದು, ಶೇಖರ ಗೌಡ ಪಾಟೀಲ್, ಉಮಾಕಾಂತ ನಾಗಮಾರಪಳ್ಳಿ, ಜೆ.ಎಂ. ಶಿವಪ್ರಸಾದ್ ಆಯ್ಕೆಯಾಗಿದ್ದಾರೆ.
ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ೧ ಸ್ಥಾನ ಆಯ್ಕೆ ನಡೆದಿದ್ದು, ಗದಿಗೆಪ್ಪ ಗೌಡ ಪಾಟೀಲ್ ಆಯ್ಕೆಯಾಗಿದ್ದಾರೆ.
ಚುನಾಯಿತ ನಿರ್ದೇಶಕರುಗಳನ್ನು ಮಹಾಮಂಡಳ ಆಡಳಿತಾಧಿಕಾರಿ ವೈ.ಎಚ್. ಗೋಪಾಲ್ ಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಅರುಣ್ ಕುಮಾರ್, ಕಾರ್ಯದರ್ಶಿ ಲಕ್ಷ್ಮೀಪತಯ್ಯ, ಚುನಾವಣಾಧಿಕಾರಿ ಸತೀಶ್ ಚಂದ್ರ ಅವರು ಅಭಿನಂದಿಸಿ ಶುಭ ಕೋರಿದರು.