ಸಹಕಾರ ಭಾರತಿಯಿಂದ ಅವಳಿ ಜಿಲ್ಲಾ ಅಭ್ಯಾಸ ವರ್ಗ ಸಹಕಾರ ನಮ್ಮ ಸಂಸ್ಕೃತಿಯ ಪ್ರತೀಕ – ಸತೀಶಚಂದ್ರ

(ಸಂಜೆವಾಣಿ ವಾರ್ತೆ)
ಹೊಸಪೇಟೆ 11 :  ಸಹಕಾರ ಇಂದು ಒಂದ ಕ್ಷೇತ್ರವಾದರೂ,  ಭಾರತೀಯ ಸಂಸ್ಕೃತಿಯ ಪ್ರತೀಕ ಹಾಗೂ ಜೀವನ ಪದ್ಧತಿಯಾಗಿತ್ತು ಎಂದು ರಾಜ್ಯಾಧ್ಯಕ್ಷ ಸತೀಶ ಚಂದ್ರ ಹೇಳಿದರು.
ಸ್ಥಳೀಯ ಮಲ್ಲಿಗೆ ಸಭಾಂಗಣದಲ್ಲಿ ಗುರುವಾರ  ಹಮ್ಮಿಕೊಂಡ ಸಹಕಾರ ಭಾರತಿ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲಾ ಅಭ್ಯಾಸ ವರ್ಗ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು
ಸಹಕಾರಿಗಳಿಂದ ಮಾತ್ರ ದೇಶ ಪ್ರಗತಿ ಸಾಧ್ಯ ಈ ಹಿನ್ನೆಲೆಯಲ್ಲಿ ಅನೇಕರ ತ್ಯಾಗದ ಫಲವಾಗಿ ಬೆಳೆದು ಬಂದ ನಾವು ಸಹಕಾರಿಗಳ ಮೂಲಕ ಆಹಾರ ಕ್ರಾಂತಿ ಮಾಡಿದ್ದು, ಇಂದು ಸಹಕಾರಿ ಕ್ಷೇತ್ರ  ಸಮಾನತೆಯ ತೊಟ್ಟಿಲಾಗಿ ಕಾರ್ಯನಿರ್ವಹಿಸುತ್ತೇದೆ ಎಂದರು. ರಾಜಕೀಯವಾಗಿ, ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಸಹಕಾರಿಗಳಿಂದ ಸಾದ್ಯವಾಗಿದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ಮಂಜುನಾಥ ಮಾತನಾಡಿ ಸಹಕಾರ ಭಾರತಿ ದೇಶದಲ್ಲಿ ರಾಜ್ಯದಲ್ಲಿ ಸ್ವಯಂಸೇವಕ ಸಂಘಟನೆಯಾಗಿ ಕಾರ್ಯ ಮಾಡುತ್ತೀದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ ರಾಘವೇಂದ್ರಶೆಟ್ಟಿ,  ವಿಜಯನಗರ  ಜಿಲ್ಲಾಧ್ಯಕ್ಷ ಲಿಯಾಖತ್ ಅಲಿ, ಬಳ್ಳಾರಿ ಜಿಲ್ಲಾಧ್ಯಕ್ಷ ಕಲ್ಗಡಿ ಮಂಜುನಾಥ, ರಾಜ್ಯ ಸಂಘಟನಾ ಕಾರ್ಯದರ್ಶಿ  ಮಂಜುನಾಥ ಪಾಲ್ಗೊಂಡಿದ್ದರು.