ಸಹಕಾರ‌ ಬ್ಯಾಂಕ್ ಗಳಲ್ಲಿ ಮಾತ್ರ ನೆಫ್ಟ್ ಮೂಲಕ ವ್ಯವಹರಿಸಿ: ಚುನಾವಣಾ ಅಧಿಕಾರಿ, ಎಸ್ ರವಿ 

ಜಗಳೂರು.ಏ.೫ :- 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಯನ್ವಯ ಹಣಕಾಸು ವ್ಯವಹಾರ ನಡೆಸಬೇಕು ಎಂದು ಚುನಾವಣಾ ಅಧಿಕಾರಿ ಎಸ್.ರವಿ ತಿಳಿಸಿದರು.ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಪ್ರಿಂಟಿಂಗ್ ಪ್ರೆಸ್,ಪೆಟ್ರೋಲ್ ಬಂಕ್,ಶಾಮಿಯಾನ ಮಾಲೀಕರ ಹಾಗೂ . ಸಹಕಾರ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತ ನಾಡಿದರು.ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿ ದಂತೆ ಪ್ರಿಂಟಿಂಗ್,ಪೆಟ್ರೋಲ್ ಡೀಸೆಲ್ ಬಂಕ್ ಮಾಲೀಕರ , ಮತ್ತು ಶಾಮಿಯಾನ ವ್ಯವಹಾರ ನಡೆಸುವಾಗ ಕಡ್ಡಾಯವಾಗಿ ಚುನಾವಣೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು.ಅಲ್ಲದೆ ಸಹಕಾರ ಬ್ಯಾಂಕ್ ಗಳಿಂದ ನೆಫ್ಟ್ ಮೂಲಕ ಹಣ ಪಾವತಿಸಿ ಕೊಳ್ಳಬೇಕು.ಖರ್ಚು ಒಬ್ಬ ವ್ಯಕ್ತಿಗೆ ₹50 ಸಾವಿರ ಮೀರುವಂತಿಲ್ಲ ಮೀರಿದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಯಾವುದೇ ರಾಜಕೀಯ ಪಕ್ಷದವರು, ಅಭ್ಯರ್ಥಿ ಮುದ್ರಿಸಿದ ಪ್ರತಿಗಳ ಸಂಖ್ಯೆ ಸಹ ರಿಜಿಸ್ಟರ್‍ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದರು.ಮುದ್ರಣಕ್ಕೆ ಆದೇಶ ನೀಡಿದ ವ್ಯಕ್ತಿಯಿಂದ ಕಡ್ಡಾಯ ವಾಗಿ ಒಂದು ಘೋಷಣೆಯನ್ನು ದ್ವಿಪ್ರತಿಯಲ್ಲಿ ಪಡೆದುಕೊಳ್ಳಬೇಕು ಹಾಗೂ ಈ ಘೋಷಣೆಗೆ ಇಬ್ಬರ ಸಾಕ್ಷಿದಾರರ ರುಜು ಪಡೆದು ಕೊಳ್ಳಬೇಕು. ಅಭ್ಯರ್ಥಿಯು 2023ರ ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕುರಿತು ಮುದ್ರಿಸುವ ಕರಪತ್ರ, ಪಾಂಪ್ಲೆಂಟ್ ಮುಂತಾದವುಗಳು ಪ್ರಜಾಪ್ರಾರತಿನಿಧ್ಯ ಕಾಯ್ದೆ 1951 ಸೆಕ್ಷನ್ 127ಎ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದರು. ಮುದ್ರಿಸುವ ಪ್ರತಿ ಕರಪತ್ರಗಳ ಮೇಲೆಯು ಮುದ್ರಕರ ಮತ್ತು ಮುದ್ರಣಕ್ಕೆ ಆದೇಶ ನೀಡಿದವರ(ಪ್ರಿಂಟರ್ ಮತ್ತು ಪಬ್ಲಿಷರ್) ಹೆಸರು ಸ್ಪಷ್ಟವಾಗಿ ಮತ್ತು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಕರಪತ್ರಗಳ ಸಂಖ್ಯೆ ಸಹ ನಮೂದಿಸಬೇಕು. ವಿವರಗಳು ಇಲ್ಲದೆ ಯಾವುದೇ ಕರಪತ್ರ ಮುದ್ರಣ ಚುನಾವಣಾ ಅಪರಾಧ ವಾಗುತ್ತದೆ. ಯಾವುದೇ ಪತ್ರಿಕಾ ಮುದ್ರಣ ಮಾಲೀಕರಿಗೆ ಮುದ್ರಣಕ್ಕೆ ಸಂಬಂಧಿಸಿದಂತೆ ಏನಾದರು ಸಮಸ್ಯೆ ಉಂಟಾದಲ್ಲಿ ಚುನಾವಣಾ ಅಧಿಕಾರಿ ಮತ್ತು ಸಹಾಯಕ ಚುನಾವಣಾ ಅಧಿಕಾರಿ  ಸಂಪರ್ಕಿಸಬಹುದು ಎಂದು ಸಲಹೆ ನೀಡಿದರು.ನಂತರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮಾತನಾಡಿ ತಾಲೂಕಿ ನಲ್ಲಿ ನಾಲ್ಕು ಕಡೆ ಚೆಕ್ ಪೋಸ್ಟ್ಗಳನ್ನು  ತೆರೆಯಲಾಗಿದೆ ಎಲ್ಲಾ ವಾಹನಗಳನ್ನು ತಪಸಣಿಯನ್ನು ಮಾಡಿ ಬಿಡಲಾಗುತ್ತದೆ  ಜನ ಸಾಮಾನ್ಯರು 50,000 ಗಳ ಮೇಲೆ ಹಣವನ್ನು ತೆಗೆದು ತೆಗೆದು ಕೊಂಡು ವಾಹನಗಳಲ್ಲಿ ಸಂಚರಿಸುವಾಗ ಅಂತಹ ಹಣವನ್ನು ಸೀಸ್ ಮಾಡಲಾಗುವುದು ನಂತರ ಅದಕ್ಕೆ ಲೆಕ್ಕ ಪುಸ್ತಕಗಳನ್ನು ತೋರಿಸಬೇಕಾಗುತ್ತದೆ ಸಭೆ ಸಮಾರಂಭಗಳು ಮತ್ತು ಧಾರ್ಮಿಕ ಸಭೆಗಳು ಮಾಡಬೇಕಾದರೆ ನಮ್ಮ ಪೊಲೀಸ್ ಇಲಾಖೆಯಿಂದ ಅಥವಾ ಚುನಾವಣಾ ಅಧಿಕಾರಿಗಳಿಂದ ಪರ್ಮಿಷನ್ ತೆಗೆದು ಕೊಳ್ಳಬೇಕು 2023ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ  ಆದೇಶವನ್ನು ಪ್ರತಿಯೊಬ್ಬ ಸಾರ್ವಜನಿ ಕರು ಪಾಲಿಸಬೇಕು ಇಲ್ಲವಾದರೆ ಅಂಥವರ ವಿರುದ್ಧ ಚುನಾವಣಾ ಆಯೋಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರುಕಟ್ರೋಲ್ ರೂಮ್ ನಿರ್ವಹಣೆ ಅಲ್ಲದೆ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿಸಲು ಅವಕಾಶವಿರುತ್ತದೆ.ಇದರಿಂದ ಅನಧಿಕೃತ ಹಣ ಮದ್ಯ ಸಾಗಾಣಿಕೆ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಕಟ್ಟೆಚ್ಚರವಹಿಸಲಾಗಿದೆ.ಶಾಂತಿಯುತ ಚುನಾವಣೆ ನಡೆಸಲಾಗು ವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್,ತಾ.ಪಂ ಇಓ ಚಂದ್ರಶೇಖರ್,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಹಾಲಸ್ವಾಮಿ. ಪ್ರಿಂಟಿಂಗ್ಸ್ ಪ್ರೆಸ್  ಮಾಲೀಕರಾದ ನಾಗಣ್ಣ,ಅರುಣಕುಮಾರ್, ತಿಪ್ಪೇಸ್ವಾಮಿ. ಸಂತೋಷ್. ಪೆಟ್ರೋಲ್ ಬಂಕ್ ಮಾಲೀಕ ಖಲಂದರ್, ಶಾಮಿಯಾನ ಮಾಲೀಕರಾದ ಇಕ್ಬಾಲ್ ಖಾನ್. ಸೇರಿದಂತೆ ಇದ್ದರು.