
ಕಲಬುರಗಿ:ಆ.28: ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರಪತ್ತಿನ ಸಹಕಾರಿ ಸಂಘದ ಕೊಡುಗೆ ದೊಡ್ಡದಾಗಿದೆ ಎಂದು ಕಾರ್ಯದರ್ಶಿಗಳಾದ ಎಸ್. ಎಸ್. ಪಟ್ಟಣಶೆಟ್ಟಿ ಹೇಳಿದರು. ಅವರು ಗದಗ ನಗರದ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ಇಪ್ಪತ್ತೆರಡನೇಯ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ಸ್ಥಾನವನ್ನು ವಹಿಸಿಕೊಂಡು ಮಾತನಾಡಿದ ಅವರು, ನಮ್ಮ ಸಹಕಾರಿ ಸಂಘವು ಪರಮ ಪೂಜ್ಯ ಲಿಂಗೈಕ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಗಳವರ ಕೃಪೆಯಿಂದ ಜನ್ಮತಾಳಿದೆ, ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಅವರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪ್ರಯತ್ನಿಸುತ್ತಾ ಆರ್ಥಿಕ ಪ್ರಗತಿಯ ಹಾದಿಯಲ್ಲಿ ಸಾಗಿ ಬಂದಿರುವುದು ಸಂಘದ ಪ್ರಗತಿಯ ಮುನ್ನೋಟವನ್ನು ಸೂಚಿಸುತ್ತದೆ. ಸಂಘದ ಸದಸ್ಯರಿಗೆ ವೇತನಾಧಾರಿತ ತುರ್ತುಸಾಲ, ಅಲ್ಪಾವಧಿಸಾಲ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲವನ್ನು ಆಡಳಿತ ಮಂಡಳಿಯವರು ಕಾಲಕಾಲಕ್ಕೆ ಮಂಜೂರು ಮಾಡಿ ಕೊಡುತ್ತಲಿದೆ. ಸದಸ್ಯರಿಗೆ ಸಹಾಯ ಹಸ್ತವನ್ನು ಚಾಚಿ “ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ” ಎನ್ನುವ ಸಹಕಾರಿ ತತ್ವವನ್ನು ಪಾಲಿಸುತ್ತಾ ಬಂದಿರುವುದು ತಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ಅಚ್ಚುಮೆಚ್ಚಿನ ಕಾರ್ಯದರ್ಶಿಗಳಾದ ಎಸ್. ಎಸ್ ಪಟ್ಟಣಶೆಟ್ಟಿ ಹೇಳಿದರು. ಈ ಸಂದರ್ಭದಲ್ಲಿ ಶ್ರೀ ಶಂಕರ ನಿಂಗಪ್ಪ ಕಲ್ಲಿಗನೂರ, ಶ್ರೀ ಮಲಕಪ್ಪ ಶಿವಪ್ಪ ಅಂಗಡಿ, ಶ್ರೀ ಶಿವರಾಚಯ್ಯ ಎಸ್. ಎಂ, ಶ್ರೀ ಶಿವಪ್ಪ ಬಸಪ್ಪ ಹೂಗಾರ, ಶ್ರೀ ಗುರುರಾಜ ಮೇಲಪ್ಪ ಕೋಟ್ಯಾಳ, ಶ್ರೀ ಡಾ|| ಶರಣಬಸಪ್ಪ ಶ್ರೀಶೈಲಪ್ಪ ಅಂಗಡಿ, ಶ್ರೀ ವಿಜಯಕುಮಾರ ಶಿವಪ್ಪ ಮಾಲಗಿತ್ತಿ, ಶ್ರೀ ಕೊಟ್ರಪ್ಪ ದಾನಪ್ಪ ಮೆಣಸಿನಕಾಯಿ, ಶ್ರೀ ಮಂಜುನಾಥ ಕಳಕಪ್ಪ ಕಂಡಕಿ, ಶ್ರೀ ಯೋಗೇಶಕುಮಾರ ಶಿವಪ್ಪ ಮತ್ತೂರು, ಶ್ರೀ ಲಕ್ಷ್ಮಪ್ಪ ರಾಮಪ್ಪ ಬಸಾಪೂರ, ಶ್ರೀ ಚನ್ನಪ್ಪ ಶರಣಪ್ಪ ದೇಸಾಯಿ, ಶ್ರೀ ಹನುಮಂತಪ್ಪ ಎನ್. ಕೆಲೂರು, ಶ್ರೀ ಉಮೇಶ ಶರಣಪ್ಪ ಉಪ್ಪಿನಬೆಟಗೇರಿ, ಶ್ರೀ ಮಂಜುನಾಥ ಬಾಲಚಂದ್ರ ಉತ್ತರಕರ, ಶ್ರೀ ಬಸವರಾಜ ಮಲ್ಲಪ್ಪ ಗೆದಗೇರಿ, ಶ್ರೀಮತಿ ಸರಸ್ವತಿ ಬಸಪ್ಪ ಗಾಣಿಗೇರ, ಶ್ರೀಮತಿ ಅನ್ನಪೂರ್ಣ ಭೀಮಪ್ಪ ಬೇವಿನಕಟ್ಟಿ, ಶಿವಸಾಯಿ ಮಮದಾಪೂರ, ಸೂರ್ಯಕಾಂತ ಕುಲಕರ್ಣಿ, ದೇವಿಂದ್ರ ವಿಶ್ವಕರ್ಮ, ಸಿದ್ದಣ್ಣ ಹತಗುಂದಿ ಸೇರಿ ಮುಂತಾದವರು ಹಾಜರಿದ್ದರು. ಪಿ. ಎ. ಹೇಮಗಿರಿಮಠ ಸ್ವಾಗತಿಸಿದರು. ಉಪನ್ಯಾಸಕ ಖರದಾನಿ ವಂದಿಸಿದರು.