ಸಹಕಾರ ಕ್ಷೇತ್ರದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ :ಜ್ಯಾಂತಿಕರ್

ಬೀದರ:ಸೆ.17:ಸಹಕಾರ ಸಂಘಗಳ ಆರ್ಥಿಕ ಕ್ಷೇತ್ರದಲ್ಲಿನ ಬೆಳವಣಿಗೆಯು ದೇಶದ ಆರ್ಥಿಕ ಅಭಿವೃದ್ದಿ ಸಾಧ್ಯವೆಂದು ಜಿಲ್ಲಾ ಒಕ್ಕೂಟದ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ನುಡಿದರು. ನಗರದ ಶಾರದಾ ರೂಡಶೇಟ ತರಬೇತಿ ಸಂಸ್ಥೆ ನೌಬಾದ ಬೀದರ ಇದರ ತರಬೇತಿ ಸಭಾಂಗಣದಲ್ಲಿ ಆಯೋಜಿಸಿದ 12ನೇ ಬೀದರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ಬೀದರ ಇದರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರಿಯ ಕ್ಷೇತ್ರವು ತನ್ನದೆ ಯಾದ ಇತಿಹಾಸವನ್ನು ಹೊಂದಿದೆ ಅದನ್ನು ಮುಂದಿನ ಪಿಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕಾಗಿದೆ ಎಂದು ತಿಳಿಸಿದರು.
ಸ್ವಾಗತ ಮತ್ತು ಪ್ರಸ್ತಾವಿಕ ನುಡಿಗಳನ್ನು ಒಕ್ಕೂಟ ಉಪಾಧ್ಯಕ್ಷರಾದ ಸಂಜೀವಕುಮಾರ ಪಾಟೀಲ್ ನೇರವೆರಿಸಿದರು.ಸಭೆಯಲ್ಲಿ ಜಿಲ್ಲಾ ನಿರ್ದೇಶಕರುಗಳಾದ ಶಿವಬಸಪ್ಪ ಚನ್ನಮಲೆ, ಸಂಜಯ ಕ್ಯಾಸಾ,ಜಗನಾಥ ಕರಂಜೆ, ಸತೀಷ ಪಾಟೀಲ್, ರಾಜಶೇಖರ ನಾಗಮೂರ್ತಿ, ಬಸವರಾಜ ಹುಡಗೆ, ಶ್ರೀಕಾಂತ ಸ್ವಾಮಿ ಸೋಲಪುರ, ಮಾಯಾದೇವಿ ಸಿಂದನಕೇರಾ ಸಹಕಾರಿಗಳಾದ ಬಾಬುರಾವ ಕಾರಬಾರಿ, ರಮೇಶ ರಡ್ಡಿ, ಮಾರುತಿ ವಾಡೆಕರ್ ಅಣಾರಾವ ನಾವದಗೇರಿ,ನಾಗಶೇಟಿ ಪಾಟೀಲ್, ಮುಖ್ಯ ಕಾರ್ಯನಿರ್ವಾಹಕ ಅಮೃತ ಹೊಸಮನಿ, ಪ್ರಾಂತೀಯ ಅಧಿಕಾರಿ ಸೂರ್ಯಕಾಂತ ರ್ಯಾಕಲೆ, ಜಿಲ್ಲಾ ಸಂಯೋಜಕ ವೀರಶಟ್ಟಿ ಕಾಮಣ್ಣಾ. ಸದಸ್ಯ ಸಹಕಾರಿಗಳು ಉಪಸ್ಥಿತರಿದ್ದರು.