ಸಹಕಾರ ಕ್ಷೇತ್ರದಲ್ಲಿ ವಿಶ್ವಾಸ ಉಳಿಸುವ ಅಗತ್ಯ :ಅರಗ ಜ್ಞಾನೇಂದ್ರ

ಬೆಂಗಳೂರು, ಸೆ.19- ಸಹಕಾರ ಕ್ಷೇತ್ರದ ಲಾಭ ಪಡೆದು, ಅದಕ್ಕೆ ಕಪ್ಪು ಚುಕ್ಕೆ ತರುವ ಯಾರನ್ನೇ ಆಗಲಿ ಸಹಿಸದೆ, ತಕ್ಕ ಶಿಕ್ಷೆ ವಿಧಿಸಿ ಸಾರ್ವಜನಿಕರ ವಿಶ್ವಾಸವನ್ನು ಉಳಿಸುವ ಅಗತ್ಯ ಇದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

“ಸಹಕಾರ ತತ್ವಕ್ಕೆ ವಿರುದ್ಧವಾಗಿ, ಸ್ವಾರ್ಥದಿಂದ, ವರ್ತಿಸಿ, ಸಹಕಾರಿ ಚಳುವಳಿ ಬಗ್ಗೆ ಅಗೌರವ ಮೂಡಿಸುವ ಯಾವುದೇ ಚಟುವಟಿಕೆ ಗಳ ವಿರುದ್ಧ ಜಾಗೃತವಾಗಿರಬೇಕು” ಎಂದು ಹೇಳಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ, ಸಹಕರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ, ಗೌರವ, ಸ್ವೀಕರಿಸಿ ಮಾತನಾಡಿದರು.

ಸಹಕಾರ ಸಂಸ್ಥೆಗಳನ್ನು ಅಚ್ಚುಕಟ್ಟಾಗಿ ನಡೆಸಬೇಕು ಹಾಗೂ ಸಾರ್ವಜನಿಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗಬೇಕು” ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಸಹಕಾರಿ ಚಳುವಳಿಯ ಮಹತ್ವ ವನ್ನು ಪರಿಗಣಿಸಿ, ಕೇಂದ್ರದಲ್ಲಿ ಪ್ರತ್ಯೇಕ ಸಚಿವ ಖಾತೆಯನ್ನೇ ಸೃಜಿಸಿದ್ದಾರೆ ಎನ್ನುವುದು, ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.