ಸಹಕಾರಿ ಹಣ ಸರ್ವರಿಗು ಸದ್ಬಳಕೆ : ಪಂಪನಗೌಡ ಬಾದರ್ಲಿ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಿಂಧನೂರು.ನ.೭-ಕಷ್ಟಪಟ್ಟು ದುಡಿದ ರೈತರ ಹಣ ಸಹಕಾರಿ ಬ್ಯಾಂಕ್‌ಗಳಲ್ಲಿ ನಂಬಿಕೆಯ ಮೇಲೆ ಇಟ್ಟಿದ್ದು ಆ ಹಣವನ್ನು ಸಾಲರೂಪದಲ್ಲಿ ನಿಮಗೆ ನೀಡುತ್ತಿದ್ದು, ಈ ಹಣ ದುರಪಯೋಗವಾಗದೆ ಶಿಕ್ಷಕರ ಪತ್ತಿನ ಸಹಕಾರಿ ನಿಯಮಿತ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ಹೇಳಿದರು.
ನಗರದ ಶ್ರೀದತ್ತಾತ್ರೇಯ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಸಿಂಧನೂರು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ನಿಯಮಿತದ ೨೦೨೦-೨೦೨೧ನೇ ಸಾಲೀನ ೨೬ನೇ ವರ್ಷದ ಸಾಮಾನ್ಯ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು ಸಹಕಾರಿ ಸಂಘಗಳು ಎಲ್ಲರ ಸಹಕಾರ, ಸಹಾಯದಿಂದ ನಡೆಯುವ ಸಂಸ್ಥೆಗಳಾಗಿದ್ದು, ಶಿಕ್ಷಕರು ತಮ್ಮ ತಮ್ಮ ವೈಯಕ್ತಿಕ ವಿಚಾರಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಸಂಘವನ್ನು ಬಲಪಡಿಸಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.
ಆರ್‌ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಹೆಸರುಗಳಿಸಿದ್ದು ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡಿದ್ದು ಮುಂದಿನ ದಿನಗಳಲ್ಲಿಯು ಸಹ ಸಿಂಧನೂರು ತಾಲೂಕಾ ಪ್ರಾಥಮಿಕ ಶಿಕ್ಷಕರ ಸಹಕಾರ ಸಂಘ ನಿಯಮಿತಕ್ಕೆ ಬೆಳವಣಿಗೆಗೆ ಬೇಕಾಗುವ ಎಲ್ಲ ಸಹಾಯ, ಸಹಕಾರ ನಾನು ನೀಡುವುದಾಗಿ ಭರವಸೆ ನೀಡಿದರು.
ಸಿಂಧನೂರು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ನಾನು ಅಧ್ಯಕ್ಷನಾದ ಮೇಲೆ ಸಾಕಷ್ಟು ಬದಲಾವಣೆಗಳನ್ನು ಮಾಡುವ ಮೂಲಕ ಶಿಕ್ಷಕರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ್ದು ಮುಂದಿನದಿನಗಳಲ್ಲಿ ಇನ್ನು ಹೆಚ್ಚು ಸೌಲಭ್ಯಗಳನ್ನು ಒದಗಿಸುತ್ತೇನೆ ಅದಕ್ಕೆ ಎಲ್ಲ ಶಿಕ್ಷಕರು ಒಗ್ಗಟ್ಟಿನಿಂದ ನನ್ನ ಕೈ ಬಲಪಡಿಸಬೇಕು ಎಂಧು ಶಿಕ್ಷಕರಲ್ಲಿ ಕೋರಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ಸಹಾಯಕ ನಿದೇರ್ಶಕ ಅಕ್ಷರ ದಾಸೋಹ ಶರಣಪ್ಪ, ಪ್ರಾಥಮಿಕ ಶಿಕ್ಷಕರ ಸಹಕಾರ ಸಂಘ ನಿಯಮಿತದ ಗೌರವ ಕಾರ್ಯದರ್ಶಿ ಸೋಮನಾಥ, ನಿದೇರ್ಶಕರಾದ ಮಲ್ಲಪ್ಪ, ದುರ್ಗಪ್ಪ, ಬಸವರಾಜ, ಶಂಭುಲಿಂಗ ಚಲ್ಲಾ, ಕೋಟ್ರೇಶ ಚಕ್ರಸಾಲಿ, ಪಂಪಣ್ಣ, ಮಲ್ಲಪ್ಪ ಬಿ. ವೇದಿಕೆಯ ಮೇಲಿದ್ದರು. ಶಿಕ್ಷಕರಾದ ವಿ. ಬಸವರಾಜ, ಸುಣ್ಣದಕಲ್, ಹುಸೇನಪ್ಪ, ಪರಶುರಾಮ ಸೇರಿದಂತೆ ಅನೇಕ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.